ಫೆ.16ರಂದು ಕೆಲವಡೆ ಮೆಟ್ರೋ ಸೇವೆ ಸ್ಥಗಿತ

Update: 2020-02-13 18:19 GMT

ಬೆಂಗಳೂರು, ಫೆ.13: ಮೆಟ್ರೋ ಸೇವೆಯು ಫೆ.16ರಂದು(ಭಾನುವಾರ) ರಾಷ್ಟ್ರೀಯ ವಿದ್ಯಾಲಯ ರಸ್ತೆ (ಆರ್‌ವಿ ರಸ್ತೆ) ಮತ್ತು ಯಲಚೇನಹಳ್ಳಿ ನಿಲ್ದಾಣದ ನಡುವೆ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ವಿಸ್ತರಿಸಿದ ರೀಚ್-4 ಸಂಬಂಧ ಯಲಚೇನಹಳ್ಳಿ ವಿದ್ಯುತ್ ಸ್ವೀಕರಿಸುವ ಉಪ ಕೇಂದ್ರದಿಂದ ಯಲಚೇನಹಳ್ಳಿ ನಿಲ್ದಾಣ ಮತ್ತು ಅಂಜನಾಪುರ ನಿಲ್ದಾಣದವರೆಗೆ ವಿದ್ಯುತ್ ಕೇಬಲ್‌ಗಳನ್ನು ಅಳವಡಿಸುವ ಕೆಲಸವನ್ನು ಬಿಎಂಆರ್‌ಸಿಎಲ್ ಕೈಗೆತ್ತಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಆರ್.ವಿ ರಸ್ತೆ ಮತ್ತು ಯಲಚೇನಹಳ್ಳಿ ನಿಲ್ದಾಣದವರೆಗಿನ ಹಸಿರು ಮಾರ್ಗದಲ್ಲಿ ಭಾನುವಾರ ಯಾವುದೇ ಮೆಟ್ರೋ ರೈಲುಗಳು ಓಡಾಡುವುದಿಲ್ಲ. ನಾಗಸಂದ್ರದಿಂದ ಆರ್‌ವಿ ರಸ್ತೆವರೆಗೆ ಮೆಟ್ರೋ ಸೇವೆ ಎಂದಿನಂತೆ ಇರಲಿದೆ ಎಂದು ನಿಗಮ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News