×
Ad

ಫೆ.23ರಂದು ಬೆಂಗಳೂರಿನಲ್ಲಿ 'ಮೈಂಡ್ ಟ್ರೀ ದ ರನ್ ಮ್ಯಾರಥಾನ್'

Update: 2020-02-14 22:07 IST

ಬೆಂಗಳೂರು, ಫೆ.14: ರಾಜರಾಜೇಶ್ವರಿ ನಗರದಲ್ಲಿರುವ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ರೋಟರಿ ಕ್ಲಬ್ ಬೆಂಗಳೂರು ಸಂಸ್ಥೆಯು ಫೆ.23ರಂದು ಮೈಂಡ್ ಟ್ರೀ ದ ರನ್ ಮ್ಯಾರಥಾನ್‌ನ ಐದನೇ ಆವೃತ್ತಿಯನ್ನು ಆಯೋಜಿಸಿದೆ.

ಮಕ್ಕಳ ಶಿಕ್ಷಣ, ಶಾಲೆಗಳಲ್ಲಿ ಮೂಲಸೌಕರ್ಯ ನಿರ್ಮಾಣ ಹಾಗೂ ಅಭಿವೃದ್ಧಿ, ಆರೋಗ್ಯ ಜಾಗೃತಿ ಹಾಗೂ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳಿಗಾಗಿ ಆರೋಗ್ಯ ಸೇವೆ, ಶಿಕ್ಷಣಕ್ಕೆ ನೆರವು, ಶಾಲೆಗಳ ಅಭಿವೃದ್ಧಿ, ನೀರು ಹಾಗೂ ಚರಂಡಿ ಯೋಜನೆಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗಾಗಿ ನಿಧಿ ಸಂಗ್ರಹದ ಉದ್ದೇಶಕ್ಕಾಗಿ ಈ ಮ್ಯಾರಥಾನ್ ಆಯೋಜಿಸಲಾಗಿದೆ.

ಮೈಂಡ್ ಟ್ರೀ(ಎಲ್ ಅಂಡ್ ಟಿ ಕಂಪೆನಿ) ಈ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದೆ. 5ಕೆ ಓಟ ಹಾಗೂ ವೈದ್ಯಕೀಯ ನೆರವಿಗಾಗಿ ಎಸ್‌ಎಸ್‌ಎನ್‌ಎಂಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪಾಲುದಾರಿಕೆ ಹೊಂದಿದೆ. ಇವರ ಜೊತೆಗೆ ಎಸ್‌ಸಿ ಎಂಟರ್‌ಪ್ರೈಸಸ್, ಡೈರಿ ಡೇ, ಸಿನೋಚಾನ್ ಹಾಗೂ ಇತರರು ರಾಜರಾಜೇಶ್ವರಿ ನಗರದ ರೋಟರಿ ಕ್ಲಬ್‌ಗೆ ನೆರವು ನೀಡಲು ಮುಂದೆ ಬಂದಿದ್ದಾರೆ.

ಈ ಮ್ಯಾರಥಾನ್ ರಾಜರಾಜೇಶ್ವರಿನ ನಗರದಲ್ಲಿರುವ ಗ್ಲೋಬಲ್ ವಿಲೇಜ್‌ ನಿಂದ ಆರಂಭವಾಗಿ ಅಲ್ಲಿಯೇ ಕೊನೆಗೊಳ್ಳಲಿದೆ. ನಾಲ್ಕು ವಿಭಾಗಗಳಾಗಿ ಈ ಮ್ಯಾರಥಾನ್ ಅನ್ನು ವಿಂಗಡಿಸಲಾಗಿದೆ. ಹಾಫ್ ಮ್ಯಾರಥಾನ್ ಹಾಗೂ 10 ಕಿ.ಮೀ, 5 ಕಿ.ಮೀ ಹಾಗೂ 3 ಕಿ.ಮೀ(ಹಾಸ್ಯದ ಓಟ ಮತ್ತು ನಡಿಗೆ). ನೂರಾರು ಕುಟುಂಬಗಳು, ಕಾರ್ಪೋರೇಟ್, ವೃತ್ತಿಪರ ಓಟಗಾರರು ಹಾಗೂ ತಾಂತ್ರಿಕ ವೃತ್ತಿಪರರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಮ್ಯಾರಥಾನ್‌ನಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಳ್ಳುವವರಿಗೆ ಗೂಡಿಬ್ಯಾಗ್, ಟಿ-ಶರ್ಟ್, ವೈಯಕ್ತಿಕ ಬಿಬ್ ಹಾಗೂ ಗಿಫ್ಟ್ ವೌಚರ್ ನೀಡಲಾಗುತ್ತದೆ. ಆನ್‌ಲೈನ್‌ನಲ್ಲಿ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಪ್ರತಿಯೊಬ್ಬ ಭಾಗಿದಾರರು ‘ಫಿನಿಷರ್ ಮೆಡಲ್’ಗೆ ಭಾಜನರಾಗುತ್ತಾರೆ.

ಈ ಬಾರಿಯ ಮ್ಯಾರಥಾನ್‌ನಲ್ಲಿ 4000ಕ್ಕೂ ಹೆಚ್ಚು ಜನ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್ www.rotaryrrn.org ಅಥವಾ ಮೊಬೈಲ್ ಸಂಖ್ಯೆ: 94498 14294, 97400 16279ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News