ಪರಿಸರ ವ್ಯವಸ್ಥೆ ಅಧ್ಯಯನ: ಫೆ.18ರಿಂದ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ

Update: 2020-02-16 15:38 GMT

ಬೆಂಗಳೂರು, ಫೆ.16: ಐಎಫ್‌ಐಎಂ ರಜತ ಮಹೋತ್ಸವದ ಅಂಗವಾಗಿ ಪರಿಸರ ವ್ಯವಸ್ಥೆಯ ಅಧ್ಯಯನ ಕುರಿತ ಅಂತರಾಷ್ಟ್ರೀಯ ಸಮ್ಮೇಳನ ಫೆ.18 ಮತ್ತು 19ರಂದು ಬೆಂಗಳೂರಿನ ತಾಜ್ ವೆಸ್ಟೆಂಡ್‌ನಲ್ಲಿ ನಡೆಯಲಿದೆ ಎಂದು ಐಎಫ್‌ಐಎಂ ಬ್ಯುಸಿನೆಸ್ ಸ್ಕೂಲ್‌ನ ನಿರ್ದೇಶಕ ಡಾ. ಆತಿಶ್ ಛಟ್ಟೋಪಾಧ್ಯಾಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಫ್‌ಐಎಂ ಮತ್ತು ಇಎಫ್‌ಎಂಡಿ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಎಐಸಿಟಿಇ, ಇಎಫ್‌ಎಂಡಿ, ಇಪಿಎಸ್‌ಐ, ಎಐಎಂಎಸ್, ಎಂಬಿಎ ಯುನಿವರ್ಸ್ ಮತ್ತು ಎನ್‌ಡಿಎಲ್‌ಐ ಸಂಸ್ಥೆಗಳು ಸಹಯೋಗ ನೀಡಲಿವೆ. ವೈಯಕ್ತಿಕ ಮತ್ತು ಕೈಗಾರಿಕೆ ಅಗತ್ಯಗಳನ್ನು ಆಧರಿಸಿದ, ಸಮ್ಮಿಳಿತ(ಅಂತರ್ಗತ) ಪರಿಸರ ವ್ಯವಸ್ಥೆಯ ಪರಿಣಾಮಕಾರಿ ಅಧ್ಯಯನ ಕ್ರಮವನ್ನು ಅಭಿವೃದ್ಧಿಗೊಳಿಸುವುದು ಸಮ್ಮೇಳನದ ಪ್ರಧಾನ ವಿಷಯವಾಗಲಿದೆ. ನಾಯಕತ್ವ, ತಂತ್ರಜ್ಞಾನ ಚಾಲಿತ ಬೇಧನ ಮತ್ತು ವೃತ್ತಿಪರ ಶಿಕ್ಷಣಕ್ಕೆ ಪ್ರಗತಿಪರ ಚೌಕಟ್ಟು - ಈ ಮೂರು ವಿಷಯಗಳನ್ನು ಸಮ್ಮೇಳನದಲ್ಲಿ ಚರ್ಚಿಸಲಾಗುವುದು ಎಂದವರು ಹೇಳಿದರು.

ಐಎಫ್‌ಐಎಂ ಬ್ಯುಸಿನೆಸ್ ಸ್ಕೂಲ್‌ನ ಅಧ್ಯಕ್ಷ ಸಂಜಯ್ ಪದೋಡೆ ಮಾತನಾಡಿ, ಸಮಾರೋಪ ಕಾರ್ಯಕ್ರಮದಲ್ಲಿ, ನಿರ್ವಹಣೆ ಶಿಕ್ಷಣದ (ಮ್ಯಾನೇಜ್‌ಮೆಂಟ್ ಎಜುಕೇಶನ್) ಅಭಿವೃದ್ಧಿಗೆ ಕೊಡುಗೆ ನೀಡಿದ ದೇಶ ವಿದೇಶದ 20 ಶಿಕ್ಷಣ ತಜ್ಞರನ್ನು ಸಮ್ಮಾನಿಸಲಾಗವುದು ಎಂದು ಹೇಳಿದರು. ಸಮಾವೇಶದ ನಿರೂಪಕ, ಐಎಫ್‌ಐಎಂ ಬ್ಯುಸಿನೆಸ್ ಸ್ಕೂಲ್‌ನ ಡೀನ್ ಡಾ ವನೀತ್ ಶರ್ಮ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News