ಕೋಳಿ ಮಾಂಸಕ್ಕೂ ಕೊರೋನ ವೈರಸ್‌ಗೂ ಸಂಬಂಧವಿಲ್ಲ: ಕೆಪಿಎಫ್‌ಬಿಎ

Update: 2020-02-16 15:44 GMT

ಬೆಂಗಳೂರು, ಫೆ.16: ಕೋಳಿ ಮಾಂಸದಲ್ಲಿ ಕೊರೋನ ಸೋಂಕು ಇದೆ ಎಂಬ ವದಂತಿಯನ್ನು ನಂಬಬಾರದು ಎಂದು ರಾಜ್ಯ ಕುಕ್ಕಟ ರೈತರ ಹಾಗೂ ತಳಿ ಸಾಕಾಣಿಕೆದಾರರ ಸಂಘ ಮನವಿ ಮಾಡಿದೆ.

ಕೋವಿಡ್ ಸೋಂಕು ಕೋಳಿಯಿಂದ ಹರಡುತ್ತಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಕೆಪಿಎಫ್‌ಬಿಎ ಸತ್ಯಶೋಧನೆ ನಡೆಸಿ ಕೋಳಿ ಮಾಂಸಕ್ಕೂ ಹಾಗೂ ಕೊರೋನಾ ವೈರಸ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.

ದೇಶದಲ್ಲಿ ಕೋಳಿಯಿಂದ ಈ ಸೋಂಕು ಹರಡಿರುವ ಕುರಿತು ಯಾವುದೇ ದಾಖಲೆ ಇಲ್ಲ. ಇದಕ್ಕೆ ವೈಜ್ಞಾನಿಕ ಆಧಾರವೂ ಇಲ್ಲ. ಕೋಳಿ ಮಾಂಸವನ್ನು ಸಾಮಾನ್ಯವಾಗಿ 100 ಡಿಗ್ರಿ ಸೆಂಟಿಗ್ರೇಡ್‌ನಲ್ಲಿ ಬೇಯಿಸಲಾಗುತ್ತದೆ. ಇಷ್ಟು ಉಷ್ಣತೆಯಲ್ಲಿ ಸೂಕ್ಷ್ಮಾಣು ಜೀವಿಗಳು ಬದುಕಲು ಸಾಧ್ಯವಿಲ್ಲ ಎಂದು ಕೆಪಿಎಫ್‌ಬಿಎನ ಅಧ್ಯಕ್ಷ ಡಾ. ಸುಶಾಂತ್ ರೈ ತಿಳಿಸಿದ್ದಾರೆ.

ಇಂತಹ ತಪ್ಪು ಸಂದೇಶಗಳು ಉತ್ತಮ ಪೌಷ್ಟಿಕಾಂಶವಿರುವ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯ ಮೇಲೆ ನಕಾರಾತ್ಮಕ ಪರಿಣಾಮವಾಗುವ ಸಾಧ್ಯತೆ ಇದೆ. ಅಪೌಷ್ಟಿಕತೆಯ ಸಮಸ್ಯೆ ಇರುವಂತಹ ಸಂದರ್ಭದಲ್ಲಿ ವದಂತಿಗಳು ಸಾಮಾಜಿಕ ಸ್ವಾಸ್ಥವನ್ನು ಹದಗೆಡಿಸುತ್ತವೆ. ಹೀಗಾಗಿ ಯಾರೂ ವದಂತಿ ಹರಡಬಾರದು ಹಾಗೂ ನಂಬಬಾರದು ಎಂದು ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News