ಮಕ್ಕಾ: ಕೆಸಿಎಫ್ ಡೇ ಪ್ರಯುಕ್ತ ರಕ್ತದಾನ ಶಿಬಿರ

Update: 2020-02-16 17:13 GMT

ಮಕ್ಕಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ಕೆಸಿಎಫ್ ಡೇ ಪ್ರಯುಕ್ತ ರಕ್ತದಾನ ಶಿಬಿರ ಜಿದ್ದಾ ಝೋನ್ ಹಾಗೂ ಸೆಕ್ಟರ್ ಸಾಂತ್ವನ ಇಲಾಖೆ ಅಧ್ಯಕ್ಷ ಮೂಸಾ ಹಾಜಿ ಕಿನ್ಯರವರ ಅಧ್ಯಕ್ಷತೆಯಲ್ಲಿ ಅಝೀಝಿಯಾ ಕಿಂಗ್ ಅಬ್ದುಲ್ಲಾ ಮೆಡಿಕಲ್ ಸಿಟಿ ಆಸ್ಪತ್ರೆಯಲ್ಲಿ ನಡೆಯಿತು.

ರಕ್ತದಾನ ಶಿಬಿರದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ, ಸಂಘಟನೆ ಇಲಾಖೆ ಕಾರ್ಯದರ್ಶಿ ಅಬ್ದುಲ್ಲಾ ಕಿನ್ಯ, ಶಿಕ್ಷಣ ಇಲಾಖೆ ಅಧ್ಯಕ್ಷರು ಆರ್.ಕೆ ಅಬ್ದುಲ್ ರಝ್ಝಾಖ್ ರಂತಡ್ಕ, ಸಾಂತ್ವನ ಇಲಾಖೆ ಕಾರ್ಯದರ್ಶಿ ಅಬ್ದುಲ್ ಹಮೀದ್ ಉಳ್ಳಾಲ, ಅಲ್ ಖಾದಿಸ ಆರ್ಗನೈಝರ್ ಯೂಸುಫ್ ಮದನಿ ಕೊಯ್ಯೂರು, ಪಬ್ಲಿಕೇಶನ್ ಅಧ್ಯಕ್ಷರು ಬಶೀರ್ ಕೆಜೆಕಾರ್, ಕುದೈ ಯೂನಿಟ್ ಕೋಶಾಧಿಕಾರಿ ಹನೀಫ್ ಕೋಳಿಯೂರು, ಸದಸ್ಯರಾದ ಕಬೀರ್ ಬಾಜಾರ್, ಹನೀಫ್ ಪಕ್ಷಿಕೆರೆ ಪಾಲ್ಗೊಂಡಿದ್ದರು.

ಇದೇ ವೇಳೆ ಆಸ್ಪತ್ರೆಯ ಸಿಬ್ಬಂದಿಗಳು ಕೆಸಿಎಫ್ ಸೆಕ್ಟರ್ ಸಮಿತಿಗೆ ಅಧಿಕೃತ ಪ್ರಮಾಣ ಪತ್ರವನ್ನು ನೀಡಿ ಗೌರವಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News