ಭಾರತ- ಆಸ್ಟ್ರೇಲಿಯ ಹಗಲು-ರಾತ್ರಿ ಟೆಸ್ಟ್ ಆಡುವ ಸಾಧ್ಯತೆ: ಬಿಸಿಸಿಐ

Update: 2020-02-17 03:17 GMT

  ಹೊಸದಿಲ್ಲಿ, ಫೆ.16: ಈ ವರ್ಷದ ಕೊನೆಯಲ್ಲಿ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ಭಾರತ ಹಗಲು-ರಾತ್ರಿ ಟೆಸ್ಟ್ ಆಡಲಿದೆ ಎಂದು ಬಿಸಿಸಿಐ ಮೂಲವೊಂದು ರವಿವಾರ ತಿಳಿಸಿದೆ. ಆಸ್ಟ್ರೇಲಿಯದಲ್ಲಿ ಯಾವುದೇ ಕ್ರೀಡಾಂಗಣದಲ್ಲೂ ಹಗಲು-ರಾತ್ರಿ ಟೆಸ್ಟ್ ಆಡಲು ತಮ್ಮ ತಂಡ ಸಿದ್ಧವಾಗಿದೆ ಎಂದು ನಾಯಕ ವಿರಾಟ್ ಕೊಹ್ಲಿ ಪ್ರತಿಪಾದಿಸಿದ ಬಳಿಕ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

   ಕಳೆದ ನವೆಂಬರ್‌ನಲ್ಲಿ ಈಡನ್ ಗಾರ್ಡನ್‌ನಲ್ಲಿ ಭಾರತ ತನ್ನ ಮೊದಲ ಹಗಲು-ರಾತ್ರಿ ಟೆಸ್ಟ್‌ನ್ನು ಆಡಿದ್ದು, ಎರಡು ದಿನಗಳಲ್ಲಿ ಪಂದ್ಯವನ್ನು ಸಾಕಷ್ಟು ಆರಾಮವಾಗಿ ಭಾರತ ಗೆದ್ದುಕೊಂಡಿತು. ಕಳೆದ ತಿಂಗಳು ಆಸ್ಟ್ರೇಲಿಯ ವಿರುದ್ಧ ಭಾರತದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲು ಮುನ್ನಾದಿನದಂದು ಕೊಹ್ಲಿ, ಸವಾಲಿಗೆ ಸಿದ್ಧ ಮತ್ತು ಸಿದ್ಧರಾಗಿ. ಅದು ಗಬ್ಬಾ, ಪರ್ತ್ ಯಾವುದೇ ಕ್ರೀಡಾಂಗಣ ಆಗಿರಲಿ, ನಾವು ಹಗಲು ರಾತ್ರಿ ಟೆಸ್ಟ್ ಪಂದ್ಯದ ಬಗ್ಗೆ ಪರಿಶೀಲಿಸುತ್ತೇವೆ ಎಂದು ಹೇಳಿದ್ದರು.

 ಅನುಭವದ ಕೊರತೆಯನ್ನು ಉಲ್ಲೇಖಿಸಿ 2018-19ರಲ್ಲಿ ಆಡಿಲೇಡ್‌ನಲ್ಲಿ ಹಗಲು ರಾತ್ರಿ ಟೆಸ್ಟ್ ಆಡುವ ಆಸ್ಟ್ರೇಲಿಯದ ಪ್ರಸ್ತಾವನೆಯನ್ನು ಭಾರತ ನಿರಾಕರಿಸಿತು.

     ಟೆಸ್ಟ್ ಕ್ರಿಕೆಟ್‌ನ ಬಗ್ಗೆ ಕ್ರಿಕೆಟ್ ಅಭಿಮಾನಗಳಿಗೆ ಆಸಕ್ತಿ ಕ್ಷೀಣಿಸುತ್ತಿರುವ ಮತ್ತೆ ಟೆಸ್ಟ್‌ಗೆ ಪ್ರೇಕ್ಷಕರನ್ನು ಆಕರ್ಷಿಸಲು ಹಗಲು-ರಾತ್ರಿ ಟೆಸ್ಟ್ ಪಂದ್ಯಗಳು ಸೂಕ್ತ ಎಂಬ ನಿರ್ಧಾರದ ಹಿನ್ನೆಲೆಯಲ್ಲಿ ಈ ವರ್ಷ ಬ್ರಿಸ್ಬೇನ್, ಗಬ್ಬಾದಲ್ಲಿ ಭಾರತ ಆಟವಾಡಲು ಆಸಕ್ತಿ ವಹಿಸಿದೆ ಎಂದು ಆಸ್ಟ್ರೇಲಿಯ ನಿರೀಕ್ಷಿಸುತ್ತಿದೆ. ಕ್ರಿಕೆಟ್ ಆಸ್ಟ್ರೇಲಿಯದ ನಿಯೋಗವು ಜನವರಿಯಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯ ಹೊರತಾಗಿ ಬಿಸಿಸಿಐನ ಉನ್ನತ ಅಧಿಕಾರಿಗಳನ್ನು ಭೇಟಿಯಾಗಿ ಹಗಲು-ರಾತ್ರಿ ಪಂದ್ಯ ಆಯೋಜಿಸುವ ನಿಟ್ಟಿನಲ್ಲಿ ಚರ್ಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News