ಲಿಯಾಂಡರ್ ಪೇಸ್‌ಗೆ ಸನ್ಮಾನ

Update: 2020-02-17 03:40 GMT

ಬೆಂಗಳೂರು, ಫೆ.16: ಬೆಂಗಳೂರು ಓಪನ್‌ನಲ್ಲಿ ತವರು ನೆಲದಲ್ಲಿ ತಮ್ಮ ಕೊನೆಯ ಎಟಿಪಿ ಟೂರ್ನಿಯಲ್ಲಿ ಆಡಿದ ಭಾರತೀಯ ಟೆನಿಸ್ ದಂತಕಥೆ ಲಿಯಾಂಡರ್ ಪೇಸ್ ಅವರನ್ನು ಮಾಜಿ ಒಲಿಂಪಿಯನ್ ಮತ್ತು ಕ್ರೀಡಾಪಟುಗಳು ರವಿವಾರ ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಸನ್ಮಾನಿಸಿದರು.

ತಮ್ಮ ಅಂತಿಮ ವರ್ಷದ ವೃತ್ತಿಪರ ಟೆನಿಸ್‌ನಲ್ಲಿ ಆಡುತ್ತಿರುವ ಪೇಸ್ ಮತ್ತು ಅವರ ಆಸ್ಟ್ರೇಲಿಯದ ಪಾಲುದಾರ ಎಬ್ಡೆನ್ ಶನಿವಾರ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ಭಾರತದ ಜೋಡಿ ಪುರವ್‌ರಾಜ ಮತ್ತು ರಾಮ್‌ಕುಮಾರ್ ರಾಮನಾಥನ್ ವಿರುದ್ಧ ಸೋತಿದ್ದರು.

    ರವಿವಾರ ಸಿಂಗಲ್ಸ್ ಫೈನಲ್‌ಗೆ ಸ್ವಲ್ಪ ಮೊದಲು 46 ರ ಹರೆಯದ ಪೇಸ್‌ರನ್ನು ಮಾಜಿ ಹಾಕಿ ಆಟಗಾರರಾದ ಜೂಡ್ ಫೆಲಿಕ್ಸ್, ವಿ.ಆರ್. ಶ್ರೀನಾಥ್ ಗೌರವಿಸಿದರು. ಮಾಜಿ ಈಜುಗಾರರಾದ ರೇಷ್ಮಾ ಮತ್ತು ನಿಶಾ ಮಿಲ್ಲೆಟ್, ಮಾಜಿ ಹೆಪ್ಟಾಥ್ಲೆಟ್ ಪ್ರಮೀಳಾ ಅಯ್ಯಪ್ಪ ಮತ್ತು ಮಾಜಿ ಲಾಂಗ್ ಜಂಪರ್ ರೀತ್ ಅಬ್ರಹಾಂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News