ಪರಿಷತ್ ಸದಸ್ಯರಾಗಿ ಲಕ್ಷ್ಮಣ ಸವದಿ ಪ್ರಮಾಣ ವಚನ ಸ್ವೀಕಾರ

Update: 2020-02-18 14:29 GMT

ಬೆಂಗಳೂರು, ಫೆ.18: ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಪರಿಷತ್ ನೂತನ ಸದಸ್ಯರಾಗಿ ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದರು.

ಮಂಗಳವಾರ ಎರಡನೇ ದಿನದ ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ ಪ್ರಮಾಣ ವಚನ ಬೋಧಿಸಿದರು. ಭಗವಂತನ ಸಾಕ್ಷಿಯಾಗಿ ಸತ್ಯ ಮತ್ತು ನಿಷ್ಠೆ ಹೆಸರಿನಲ್ಲಿ ಪರಿಷತ್ ಸದಸ್ಯರಾಗಿ ಶಪಥ ಕೈಗೊಂಡರು. ನಂತರ ಪರಿಷತ್ ಸದಸ್ಯರು ಡಿಸಿಎಂ ಸವದಿಯನ್ನು ಹಸ್ತಲಾಘವದ ಮೂಲಕ ಅಭಿನಂದಿಸಿದರು.

ನೂತನ ಸದಸ್ಯರ ಪ್ರಮಾಣ ವಚನದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ್, ಸಚಿವರಾದ ಜೆ.ಸಿ ಮಾಧುಸ್ವಾಮಿ, ಶ್ರೀರಾಮುಲು, ಕೆ.ಎಸ್.ಈಶ್ವರಪ್ಪ, ಸುರೇಶ್ ಕುಮಾರ್, ಪ್ರಭು ಚೌಹಾಣ್, ರಮೇಶ್ ಜಾರಕಿಹೊಳಿ, ಬೈರತಿ ಬಸವರಾಜು, ಬಿ.ಸಿ ಪಾಟೀಲ್, ಕೆ.ಸಿ ನಾರಾಯಣಗೌಡ, ಜಗದೀಶ್ ಶೆಟ್ಟರ್, ಶಿವರಾಮ್ ಹೆಬ್ಬಾರ್, ಎಚ್.ನಾಗೇಶ್ ಹೆಸರಿನ ಕಾಗದ ಪತ್ರಗಳನ್ನು ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಸದನಕ್ಕೆ ಮಂಡಿಸಿದರು. ಸಚಿವರಾದ ಆನಂದ್‌ಸಿಂಗ್, ವಿ.ಸೋಮಣ್ಣ ಮತ್ತು ಎಸ್.ಟಿ ಸೋಮಶೇಖರ್ ಕೂಡ ತಮ್ಮ ಹೆಸರಿನ ಕಾಗದ ಪತ್ರ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News