ಆಸ್ಟ್ರೇಲಿಯ ವಿರುದ್ಧ ಪಂದ್ಯ ಭಾರತಕ್ಕೆ ಮನ್‌ಪ್ರೀತ್ ಸಾರಥ್ಯ

Update: 2020-02-19 04:58 GMT

ಹೊಸದಿಲ್ಲಿ, ಫೆ.18: ಮುಂಬರುವ ವಿಶ್ವದ ನಂ.2ನೇ ತಂಡ ಆಸ್ಟ್ರೇಲಿಯ ವಿರುದ್ಧದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯಗಳಿಗೆ ಭಾರತದ 24 ಸದಸ್ಯರುಗಳನ್ನು ಒಳಗೊಂಡ ತಂಡಕ್ಕೆ ಮನ್‌ಪ್ರೀತ್ ಸಿಂಗ್ ಸಾರಥ್ಯವಹಿಸಲಿದ್ದಾರೆ. ಭಾರತದ ಪುರುಷರ ಹಾಕಿ ತಂಡವನ್ನು ಮಂಗಳವಾರ ಹಾಕಿ ಇಂಡಿಯಾ ಪ್ರಕಟಿಸಿದೆ.

ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ಫೆ.21 ಹಾಗೂ 22ರಂದು ನಡೆಯಲಿರುವ ಪಂದ್ಯಕ್ಕೆ ಹರ್ಮನ್‌ಪ್ರೀತ್ ಸಿಂಗ್ ಉಪ ನಾಯಕನ ಜವಾಬ್ದಾರಿವಹಿಸಿಕೊಳ್ಳಲಿದ್ದಾರೆ. ವಿಶ್ವ ಚಾಂಪಿಯನ್ ಬೆಲ್ಜಿಯಂ ವಿರುದ್ಧ ಇತ್ತೀಚೆಗೆ ನಡೆದ ಮೊದಲ ಪ್ರೊ ಲೀಗ್ ಪಂದ್ಯವನ್ನು 2-1 ಅಂತರದಿಂದ ಜಯಿಸಿದ್ದ ಭಾರತ, ಎರಡನೇ ಪಂದ್ಯವನ್ನು 2-3 ಅಂತರದಿಂದ ಸೋತಿತ್ತು. ಆದಾಗ್ಯೂ ಎಫ್‌ಐಎಚ್ ವಿಶ್ವ ರ್ಯಾಂಕಿಂಗ್‌ನಲ್ಲಿ ಭಾರತೀಯ ಹಾಕಿ ತಂಡ ನಾಲ್ಕನೇ ಸ್ಥಾನಕ್ಕೇರಿತ್ತು.

‘‘ವಿಶ್ವ ಚಾಂಪಿಯನ್ನರ ವಿರುದ್ಧ ಎರಡು ಹೈವೋಲ್ಟೇಜ್ ಪಂದ್ಯಗಳ ಬಳಿಕ ನಾವೀಗ ಮತ್ತೊಂದು ಬಲಿಷ್ಠ ತಂಡ ಆಸ್ಟ್ರೇಲಿಯವನ್ನು ಎದುರಿಸಲಿದ್ದೇವೆ. ನಾವು ಮತ್ತೊಮ್ಮೆ ಬಲಿಷ್ಠ ಆಟಗಾರರಿರುವ ತಂಡದೊಂದಿಗೆ ಸ್ಪರ್ಧಿಸಲಿದ್ದೇವೆ. ಇವರು ತಂಡಕ್ಕೆ ಸಮತೋಲನ ಒದಗಿಸಲಿದ್ದಾರೆ. ವಿಶ್ವದ ಶ್ರೇಷ್ಠ ತಂಡಗಳ ವಿರುದ್ಧ ಸ್ಪರ್ಧಿಸಲು ನೆರವಾಗಲಿದ್ದಾರೆ’’ ಎಂದು ಮುಖ್ಯ ಕೋಚ್ ಗ್ರಹಾಂ ರೆಡ್ ತಿಳಿಸಿದರು.

ಭಾರತೀಯ ಹಾಕಿ ತಂಡ

 ಶ್ರೀಜೇಶ್ ಪಿ.ಆರ್., ಕೃಷ್ಣ ಪಾಠಕ್(ಗೋಲ್‌ಕೀಪರ್‌ಗಳು), ಅಮಿತ್ ರೋಹಿದಾಸ್, ಸುರೇಂದರ್ ಕುಮಾರ್, ಬೀರೇಂದ್ರ ಲಾಕ್ರಾ, ಹರ್ಮನ್‌ಪ್ರೀತ್ ಸಿಂಗ್(ಉಪ ನಾಯಕ), ವರುಣ್ ಕುಮಾರ್, ಗುರಿಂದರ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಮನ್‌ಪ್ರೀತ್ ಸಿಂಗ್(ನಾಯಕ), ವಿವೇಕ್ ಸಾಗರ್ ಪ್ರಸಾದ್, ಹಾರ್ದಿಕ್ ಸಿಂಗ್, ಚಿಂಗ್ಲೆಸನಾ ಸಿಂಗ್, ರಾಜ್‌ಕುಮಾರ್ ಪಾಲ್, ಆಕಾಶ್‌ದೀಪ್ ಸಿಂಗ್, ಸುಮಿತ್, ಲಲಿತ್ ಉಪಾಧ್ಯಾಯ, ಗುರುಸಾಹಿಬ್‌ಜಿತ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಎಸ್.ವಿ. ಸುನೀಲ್, ಜರ್ಮೈನ್‌ಪ್ರೀತ್ ಸಿಂಗ್, ಸಿಮ್ರಾನ್‌ಜೀತ್ ಸಿಂಗ್, ನೀಲಕಂಠ ಶರ್ಮಾ, ರಮಣ್‌ದೀಪ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News