ಕೇಂದ್ರದ ‘‘ದ್ವೇಷದ ರಾಜಕೀಯ’’ದಿಂದಾಗಿ ಮೂವರು ನಾಯಕರ ಸಾವನ್ನು ಕಾಣುವಂತಾಗಿದೆ: ಮಮತಾ ಬ್ಯಾನರ್ಜಿ

Update: 2020-02-19 09:16 GMT

ಕೋಲ್ಕತಾ, ಫೆ.19: ನಟ ಹಾಗೂ ತೃಣಮೂಲ ಕಾಂಗ್ರೆಸ್ ಮುಖಂಡ ತಪಾಸ್ ಪಾಲ್‌ಗೆ ಬುಧವಾರ ಅಂತಿಮ ನಮನ ಸಲ್ಲಿಸಿದ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಪಾಲ್ ಸಾವಿಗೆ ಕೇಂದ್ರ ಸರಕಾರವೇ ಕಾರಣ ಎಂದು ದೂರಿದರು. ಕೇಂದ್ರದ ‘‘ದ್ವೇಷದ ರಾಜಕೀ ಯ’’ದಿಂದಾಗಿ ನಾನು ಮೂವರು ನಾಯಕರ ಸಾವನ್ನು ಕಾಣುವಂತಾಗಿದೆ ಎಂದರು.

    61ರ ಹರೆಯದ ಪಾಲ್ ಮುಂಬೈನಲ್ಲಿ ಮಂಗಳವಾರ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಚಿಟ್ ಫಂಡ್ ಹಗರಣದಲ್ಲಿ ಬಂಗಾಳದ ಆಡಳಿತರೂಢ ತೃಣಮೂಲ ಕಾಂಗ್ರೆಸ್‌ನ ಹಲವು ನಾಯಕರ ವಿರುದ್ದ ಆರೋಪವಿತ್ತು. ಪಾಲ್ ಕೂಡ ಈ ಹಗರಣದಲ್ಲಿದ್ದಾರೆ ಎಂದು ಆರೋಪಿಸಲಾಗಿತ್ತು.

 ‘‘ಕೇಂದ್ರ ಸರಕಾರದ ದ್ವೇಷದ ರಾಜಕಾರಣ ಖಂಡನೀಯ. ಅದು ಯಾರನ್ನೂ ಕೂಡ ಬಿಟ್ಟಿಲ್ಲ. ದ್ವೇಷ ರಾಜಕಾರಣದಿಂದ ಮೂವರು ನಾಯಕರ ಸಾವನ್ನು ನಾನು ಕಾಣುವಂತಾಗಿದೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ. ಆದರೆ, ಕೇಂದ್ರ ಸರಕಾರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಪ್ರತಿದಿನ ಚಿತ್ರಹಿಂಸೆ ನೀಡುತ್ತಿದೆ. ಪಾಲ್‌ರಲ್ಲದೆ, ತೃಣಮೂಲ ಸಂಸದ ಸುಲ್ತಾನ್ ಅಹ್ಮದ್ ಹಾಗೂ ಇನ್ನೋರ್ವ ನಾಯಕ ಪ್ರಸೂನ್ ಮುಖರ್ಜಿಯ ಪತ್ನಿ ಕೂಡ ಕೇಂದ್ರ ಸರಕರದ ಕಿರುಕುಳದಿಂದ ಮೃತಪಟ್ಟಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News