ಸಂಗಕ್ಕರ ಅರ್ಧ ಶತಕ: ಎಂಸಿಸಿಗೆ ಭರ್ಜರಿ ಜಯ

Update: 2020-02-21 13:26 GMT

ಲಾಹೋರ್, ಫೆ.20: ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಪಾಕಿಸ್ತಾನ ಪ್ರವಾಸದ ಅಂತಿಮ ಟ್ವೆಂಟಿ-20 ಪಂದ್ಯದಲ್ಲಿ ಕುಮಾರ ಸಂಗಕ್ಕರ ನೇತೃತ್ವದ ಎಂಸಿಸಿ ಶಾಹಿದ್ ಅಫ್ರಿದಿ ನಾಯಕತ್ವದ ಮುಲ್ತಾನ್ ಸುಲ್ತಾನ್ಸ್ ತಂಡವನ್ನು 72 ರನ್‌ಗಳ ಅಂತರದಿಂದ ಭರ್ಜರಿ ಅಂತರದಿಂದ ಮಣಿಸಿತು.

35 ಎಸೆತಗಳಲ್ಲಿ 52 ರನ್(3 ಬೌಂಡರಿ, 3 ಸಿಕ್ಸರ್)ಸಿಡಿಸಿದ ಸಂಗಕ್ಕರ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸಿದರು. ರವಿ ಬೊಪಾರ ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 87 ರನ್ ಸೇರಿಸಿ ತಂಡವನ್ನು ಆಧರಿಸಿದರು. ಸಂಗಕ್ಕರ ಸಿಡಿಸಿದ ಅರ್ಧಶತಕದ ನೆರವಿನಿಂದ ಎಂಸಿಸಿ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 184 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಸುಲ್ತಾನ್ಸ್ 18 ಓವರ್‌ನೊಳಗೆ 112 ರನ್‌ಗೆ ಆಲೌಟಾಯಿತು.

 ಸಂಗಕ್ಕರ ತನ್ನ 42ನೇ ವಯಸ್ಸಿನಲ್ಲಿ 43ನೇ ಟ್ವೆಂಟಿ-20 ಅರ್ಧಶತಕ ಸಿಡಿಸಿ ಗಮನ ಸೆಳೆದರು. ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಅರ್ಧಶತಕ ಸಿಡಿಸಿದ ನಾಲ್ಕನೇ ಹಿರಿಯ ವಯಸ್ಸಿನ ನಾಯಕ ಎನಿಸಿಕೊಂಡರು.

ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾವುಲ್ ಹಕ್ 2017ರಲ್ಲಿ 42 ವರ್ಷ, 259ನೇ ದಿನದಲ್ಲಿ ಔಟಾಗದೆ 61 ರನ್ ಗಳಿಸಿ ದಾಖಲೆ ನಿರ್ಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News