ಪರಿಸರ ವ್ಯವಸ್ಥೆ ಅಧ್ಯಯನ: ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಸಮ್ಮೇಳನ

Update: 2020-02-20 18:20 GMT

ಬೆಂಗಳೂರು, ಫೆ.20: ಐಎಫ್ಐಎಂ ರಜತ ಮಹೋತ್ಸವದ ಅಂಗವಾಗಿ ಪರಿಸರ ವ್ಯವಸ್ಥೆಯ ಅಧ್ಯಯನ ಕುರಿತು ಬೆಂಗಳೂರಿನ ತಾಜ್ ವೆಸ್ಟೆಂಡ್ ನಲ್ಲಿ ಫೆ.18 ಮತ್ತು 19ರಂದು ಆಯೋಜಿಸಿದ್ದ ಅಂತರಾಷ್ಟ್ರೀಯ ಸಮ್ಮೇಳನಕ್ಕೆ ಇಎಫ್ಎಂಡಿಯ ಪ್ರಧಾನ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎರಿಕ್ ಕಾರ್ನುಯೆಲ್ ಹಾಗೂ ಐಐಎಂ ಕೋಝಿಕೋಡ್ ನಿರ್ದೇಶಕ ಡಾ. ದೇಬಾಶಿಷ್ ಚಟರ್ಜಿ ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಐಎಫ್ಐಎಂ ಬ್ಯುಸಿನೆಸ್ ಸ್ಕೂಲ್ ನಿರ್ದೇಶಕ ಡಾ. ಆತಿಶ್ ಛಟ್ಟೋಪಾಧ್ಯಾಯ, ಪ್ರತೀ ವರ್ಷ ಭಾರತದ ಹಲವು ವಿದ್ಯಾರ್ಥಿಗಳು ಯುರೋಪ್ ಮತ್ತು ಅಮೆರಿಕಕ್ಕೆ ಉನ್ನತ ಶಿಕ್ಷಣ ಪಡೆಯುವ ಉದ್ದೇಶದಿಂದ ತೆರಳುತ್ತಿದ್ದಾರೆ. ಇದೀಗ ಪಾಶ್ಚಿಮಾತ್ಯ ದಕ್ಷತೆ ಮತ್ತು ಭಾರತೀಯ ಆಶಯಗಳು ಸೇರಿದ ವಿಶಿಷ್ಟ ಶಿಕ್ಷಣ ಕ್ರಮವನ್ನು ಐಎಫ್ಐಎಂ ಬಿಸಿನೆಸ್ ಸ್ಕೂಲ್ ಪ್ರಸ್ತುತಪಡಿಸುತ್ತಿದೆ ಎಂದು ಹೇಳಿದರು.

ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಟಿಇ ಅಧ್ಯಕ್ಷ ಡಾ. ಅನಿಲ್ ಸಹ್ರಬುದ್ಧೆ, ಮ್ಯಾನೇಜ್ಮೆಂಟ್ ಶಿಕ್ಷಣದಲ್ಲಿ ದಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರಕಾರ ಹಲವು ಸುಧಾರಣೆಗಳನ್ನು ಜಾರಿಗೆ ತಂದಿದೆ. ಐಎಫ್ಐಎಂ ಸಂಸ್ಥೆ ಮ್ಯಾನೇಜ್ಮೆಂಟ್ ಶಿಕ್ಷಣದಲ್ಲಿ ಪ್ರಗತಿಪರ ದೃಷ್ಟಿಕೋನದ ಯೋಜನೆಯನ್ನು ಅಳವಡಿಸಿಕೊಂಡಿದೆ ಎಂದು ಹೇಳಿದರು.

ಐಎಫ್ಐಎಂ ಬ್ಯುಸಿನೆಸ್ ಸ್ಕೂಲ್ ಅಧ್ಯಕ್ಷ ಸಂಜಯ್ ಪದೋಡೆ , ಐಎಫ್ಐಎಂ ಬ್ಯುಸಿನೆಸ್ ಸ್ಕೂಲ್ ಡೀನ್ ಡಾ. ನವನೀತ್ ಶರ್ಮ ಡಾ. ಎ ಪರಶುರಾಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News