×
Ad

ಬೆಂಗಳೂರಿನಲ್ಲಿ ಎಚ್1ಎನ್1 ಭೀತಿ, ಸಿಬ್ಬಂದಿಗೆ ಮನೆಯಲ್ಲೇ ಕೆಲಸ ಮಾಡಿ ಎಂದ ಜರ್ಮನಿ ಕಂಪೆನಿ

Update: 2020-02-21 12:45 IST

ಬೆಂಗಳೂರು, ಫೆ.21: ಹೆಚ್1ಎನ್1 ಸೋಂಕಿನ ಭೀತಿಯಿಂದ ಜರ್ಮನಿ ಮೂಲದ ಎಸ್‌ಎಪಿ ಸಂಸ್ಥೆ ಫೆ.20 ರಿಂದ 28ರವರೆಗೂ ಭಾರತದ ದೆಹಲಿ, ಗುರುಗ್ರಾಮ ಹಾಗೂ ಬೆಂಗಳೂರಿನ ಕಚೇರಿಗಳನ್ನು ಬಂದ್ ಮಾಡಿ ಆದೇಶಿಸಿದೆ.

ಸಂಸ್ಥೆಯು ಮನೆಯಿಂದಲೇ ಕೆಲಸ ಮಾಡಿ ಎಂದು ಸಂಸ್ಥೆಯು ಉದ್ಯೋಗಿಗಳಿಗೆ ಆದೇಶ ಪತ್ರದಲ್ಲಿ ಹೇಳಿದೆ. ಫೆ.28ರವರೆಗೂ ಮಾರತ್ತಹಳ್ಳಿಯ ಕಚೇರಿಯನ್ನು ಶುಚಿಗೊಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ವಿವರಿಸಿದೆ.

ಮೂಲಗಳ ಪ್ರಕಾರ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಇಬ್ಬರು ಉದ್ಯೋಗಿಗಳಿಗೆ ಹೆಚ್1ಎನ್1 ಸೋಂಕು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಕಾರಣದಿಂದ ಉದ್ಯೋಗಿಗಳಿಗೆ ಹಾಗೂ ಅವರ ಕುಟುಂಬಸ್ಥರಿಗೆ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿ ತೆರಳುವಂತೆ ಸಂಸ್ಥೆ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News