ಪಾಕ್ ಮೇಲೆ ಪ್ರೀತಿ ಇದ್ದರೆ ಆ ದೇಶಕ್ಕೇ ಹೋಗಲಿ: ಮಾಜಿ ಸಚಿವ ಎಂ.ಬಿ.ಪಾಟೀಲ್

Update: 2020-02-21 13:51 GMT

ಬೆಂಗಳೂರು, ಫೆ. 21: ‘ಪಾಕ್ ಪರ ಘೋಷಣೆ ಕೂಗುವವರು ಪಾಕಿಸ್ತಾನದ ಮೇಲೆ ಪ್ರೀತಿ ಇದ್ದರೆ ಅವರು ಆ ದೇಶಕ್ಕೆ ಹೋಗಬೇಕು’ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ಒಂದು ದರಿದ್ರ ರಾಷ್ಟ್ರ. ಅದರ ಜೊತೆ ಏಕೆ ಹೋಲಿಕೆ ಮಾಡಿಕೊಳ್ಳಬೇಕು? ಅಮೂಲ್ಯ ಇನ್ನೂ ಕೇವಲ 18-19 ವರ್ಷದ ಯುವತಿ ಇರಬೇಕು. ಇಂಥವರು ಘೋಷಣೆ ಕೂಗ್ತಾರೆ ಅಂದರೆ ಇದರ ಹಿಂದೆ ಯಾರಿದ್ದಾರೆ ನೋಡಬೇಕಿದೆ ಎಂದರು.

ಹೈದರಾಬಾದ್ ಮೂಲದ ನಾಯಕರೂ ಅಮೂಲ್ಯ ಜೊತೆಗೆ ವೇದಿಕೆಯಲ್ಲಿದ್ದರು. ಈ ಬಗ್ಗೆ ಗೃಹ ಇಲಾಖೆ ಕಾನೂನು ಕ್ರಮ ಕೈಗೊಳ್ಳಲಿದೆ. ಈ ಬಗ್ಗೆ ಕೂಡಲೇ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಎಂ.ಬಿ.ಪಾಟೀಲ್ ಇದೇ ವೇಳೆ ಆಗ್ರಹಿಸಿದರು.

‘ಇಲ್ಲಿನ ಸಕಲ ಸವಲತ್ತುಗಳನ್ನು ಅನುಭವಿಸಿ ಪಾಕಿಸ್ತಾನ ಝಿಂದಾಬಾದ್ ಎನ್ನುವ ಕೆಟ್ಟ ಮನಸ್ಥಿತಿಯ ಎಲ್ಲರನ್ನು ಈ ದೇಶದಿಂದಲೇ ಗಡಿಪಾರು ಮಾಡಬೇಕು. ಬದುಕಿನ ಕೊನೆ ಉಸಿರು ಇರುವವರೆಗೂ ಪಶ್ಚಾತಾಪ ಪಡಬೇಕು. ಅಂತಹ ಕಠಿಣ ಕ್ರಮ ಜರುಗಿಸಬೇಕು. ಇಂತವರಿಗೆ ಪ್ರಚೋದನೆ ನೀಡಿದವರು ಶಿಕ್ಷೆಗೆ ಅರ್ಹರು’

-ಎಸ್.ಆರ್.ಪಾಟೀಲ್, ಮೇಲ್ಮನೆ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News