ಬೆಂಗಳೂರು: ಫೆ.24ರಿಂದ ವಾಯುಪಡೆ ನೇಮಕಾತಿಗೆ ರ‍್ಯಾಲಿ

Update: 2020-02-21 17:10 GMT

ಬೆಂಗಳೂರು, ಫೆ.21: ಭಾರತೀಯ ವಾಯು ಪಡೆಯು ಫೆ.24ರಿಂದ 26 ರವರೆಗೆ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ರ‍್ಯಾಲಿಯನ್ನು ಏರ್ಪಡಿಸಿದೆ.

ವೈದ್ಯಕೀಯ ಸಹಾಯಕರ ಹುದ್ದೆಗೆ ಪಿಯುಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಇಂಜಿನಿಯರಿಂಗ್ ಪದವಿಯಲ್ಲಿ ಶೇ.50ರಷ್ಟು ಅಂಕಗಳನ್ನು ಪಡೆದಿರಬೇಕು. ಮಾನ್ಯತೆ ಪಡೆದಿರುವ ಸಂಸ್ಥೆಯಲ್ಲಿ ಫಾರ್ಮಸಿಯಲ್ಲಿ ಡಿಪ್ಲೊಮೋ ತೇರ್ಗಡೆ ಹೊಂದಿರಬೇಕು. ಡಿ- ಫಾರ್ಮಸಿ ಮಾಡಿರುವ ಅಭ್ಯರ್ಥಿಗಳು ಅರ್ಹರಾಗಿರುವುದಿಲ್ಲ. 17 ಜನವರಿ 2000 ರಿಂದ 30 ಡಿಸೆಂಬರ್ 2003 ರೊಳಗೆ ಜನಿಸಿದವರಾಗಿರಬೇಕು.

ಎಜುಕೇಶನ್ ಇನ್‌ಸ್ಟ್ರಕ್ಟರ್ ಹುದ್ದೆಗೆ 17 ಜನವರಿ 1996 ರಿಂದ 30 ಡಿಸೆಂಬರ್ 2000 ರೊಳಗೆ ಜನಿಸಿರುವ ಅಭ್ಯರ್ಥಿಗಳು ಬಿಎ ಪದವಿ, ಇಂಜಿನಿಯರಿಂಗ್ ಅಥವಾ ಬಿಎಸ್‌ಸಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಐಟಿ, ಕಂಪ್ಯೂಟರ್ ಸೈನ್ಸ್, ಲೆಕ್ಕಶಾಸ್ತ್ರ ಅಥವಾ ಬಿಸಿಎಯಲ್ಲಿ ಶೇ.50 ರಷ್ಟು ಅಂಕಗಳನ್ನು ಪಡೆದಿರಬೇಕು ಮತ್ತು ಮಾನ್ಯತೆ ಪಡೆದಿರುವ ಸಂಸ್ಥೆಯಲ್ಲಿ ಬಿಇಡಿ ಶೇ.50ರಷ್ಟು ಅಂಕಗಳನ್ನು ಪಡೆದಿರಬೇಕು.

ಜ.17, 1993 ರಿಂದ ಡಿಸೆಂಬರ್ 30, 2000 ರೊಳಗೆ ಜನಿಸಿರುವ ಅಭ್ಯರ್ಥಿಗಳು ಎ.ಇ. ಹುದ್ದೆಗಾಗಿ ಸ್ನಾತಕೋತ್ತರ ಪದವಿಯಲ್ಲಿ ಇಂಗ್ಲಿಷ್, ಮನೋವಿಜ್ಞಾನ, ಎಂಎಸ್‌ಸಿ ಭೌತಶಾಸ್ತ್ರ, ಗಣಿತ ಶಾಸ್ತ್ರ, ಐಟಿ, ಕಂಪ್ಯೂಟರ್ ಸೈನ್ಸ್, ಲೆಕ್ಕಶಾಸ್ತ್ರ ಅಥವಾ ಎಂಸಿಎನಲ್ಲಿ ಶೇ.50ರಷ್ಟು ಅಂಕಗಳನ್ನು ಪಡೆದಿರಬೇಕು ಮತ್ತು ಮಾನ್ಯತೆ ಪಡೆದಿರುವ ಸಂಸ್ಥೆಯಲ್ಲಿ ಬಿಇಡಿ ಶೇ.50ರಷ್ಟು ಅಂಕಗಳನ್ನು ಪಡೆದಿರಬೇಕು.

ಈ ನೇಮಕಾತಿಗೆ ಯಾವುದೇ ರೀತಿಯ ಹಣವನ್ನು ಪಾವತಿಸುವಂತಿಲ್ಲ. ಅರ್ಹರಾಗಿರುವ ಅಭ್ಯರ್ಥಿಗಳು ವಿದ್ಯಾರ್ಹತೆ ಅಂಕಪಟ್ಟಿ ಮತ್ತು ತೇರ್ಗಡೆಗೊಂಡಿರುವ ಮೆಟ್ರಿಕ್ಯುಲೇಶನ್ ಪ್ರಮಾಣಪತ್ರ, ಅನ್ವಯಿಸುವ ಹುದ್ದೆಗೆ ಮತ್ತು ಅಭ್ಯರ್ಥಿಗಳು ಸ್ವಯಂ ದೃಢೀಕರಿಸಿರುವ ಎಲ್ಲ ಪ್ರಮಾಣ ಪತ್ರಗಳ ನಾಲ್ಕು ನಕಲಿ ಪ್ರತಿಗಳನ್ನು ನೀಡಬೇಕು.

ಇತ್ತೀಚಿನ 8 ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು ಸಲ್ಲಿಸಬೇಕಾಗುತ್ತದೆ. ಎನ್‌ಸಿಸಿ ಪ್ರಮಾಣಪತ್ರ ಇದ್ದಲ್ಲಿ ಲಗತ್ತಿಸಬೇಕು. ಅಭ್ಯರ್ಥಿಗಳ ಅರ್ಹತೆ, ವೈದ್ಯಕೀಯ ಗುಣಮಟ್ಟ, ಆಯ್ಕೆಯ ವಿಧಾನ, ಬೇಕಾಗಿರುವಂತಹ ದಾಖಲೆಗಳ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ; 080-25592199 ಮತ್ತು 7 ಏರ್‌ಮೆನ್ ಸೆಲೆಕ್ಷನ್ ಸೆಂಟರ್, ನಂ.1 ಕಬ್ಬನ್ ರಸ್ತೆ, ಬೆಂಗಳೂರು-560001 ನ್ನು ಸಂಪರ್ಕಿಸಬಹುದಾಗಿದೆ ಎಂದು ವಿಂಗ್ ಕಮಾಂಡರ್ ಮಯಾಂಕ್ ಕನುಂಗೊ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News