ಆಫ್‌ಲೈನ್ ವ್ಯವಸ್ಥೆ ಜಾರಿಗೆ ಬೆಂಗಳೂರು ಕೇಂದ್ರ ವಿವಿ ತಯಾರಿ

Update: 2020-02-21 17:15 GMT

ಬೆಂಗಳೂರು, ಫೆ. 21: ಮುಂದಿನ ಶೈಕ್ಷಣಿಕ ವರ್ಷದಿಂದ ಹಿಂದಿನ ರೀತಿಯಲ್ಲಿಯೇ ಆಫ್‌ಲೈನ್‌ನಲ್ಲಿ ಸಂಯೋಜನೆ ನೀಡುವ ಪದ್ಧತಿ ಜಾರಿಗೆ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ಮುಂದಾಗಿದೆ.

ಕಳೆದ ವರ್ಷ ಬೆಂಗಳೂರು ಕೇಂದ್ರ ವಿವಿಯು ತಮ್ಮ ವ್ಯಾಪ್ತಿಯ ಕಾಲೇಜುಗಳಿಗೆ ಆನ್‌ಲೈನ್ ಸಂಯೋಜನೆ ನೀಡುವ ಪದ್ಧತಿ ಜಾರಿಗೆ ತರಲಾಗಿತ್ತು. ಅದರ ಭಾಗವಾಗಿ ಸಂಯೋಜನೆ ನವೀಕರಣ, ಶಾಶ್ವತ ಸಂಯೋಜನೆ, ಇನ್‌ಟೇಕ್ ಹೆಚ್ಚಳ, ಕಾಲೇಜು ಮಾನ್ಯತೆ ರದ್ದು ಸೇರಿದಂತೆ ಹಲವು ವಿಷಯಗಳಿಗೆ ಆನ್‌ಲೈನ್ ಮೂಲಕವೇ ಪ್ರಕ್ರಿಯೆ ನಡೆಸಿತ್ತು.

ಆನ್‌ಲೈನ್ ಅರ್ಜಿ ಸಲ್ಲಿಕೆ ಶುಲ್ಕ, ಸ್ಥಳೀಯ ವಿಚಾರಣಾ ಸಮಿತಿ(ಎಲ್‌ಐಸಿ) ಪರಿಶೀಲನೆ ವೇಳೆ ಸದಸ್ಯರ ಅಕ್ರಮ ಸೇರಿದಂತೆ ವಿವಿಧ ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಾಗದ ಸಮಿತಿಯು ಮತ್ತೆ ಆಫ್‌ಲೈನ್ ಪ್ರಕ್ರಿಯೆಗೆ ವಾಪಸ್ಸಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ಪ್ರಕ್ರಿಯೆಯ ವಿರುದ್ದ ವಿವಿ ಆಂತರಿಕ ವಲಯದಲ್ಲಿಯೇ ಟೀಕೆ ವ್ಯಕ್ತವಾಗಿದ್ದು, ತಾಂತ್ರಿಕ ದೋಷಗಳನ್ನು ಸರಿಪಡಿಸಿ, ಆನ್‌ಲೈನ್ ಪದ್ಧತಿಯಲ್ಲಿಯೇ ಮುಂದುವರಿಸಲು ಆಗ್ರಹಿಸಲಾಗಿದೆ.

ಕಳೆದ ವರ್ಷ ಕಾಲೇಜುಗಳು ಆನ್‌ಲೈನ್ ಮೂಲಕ ಅರ್ಜಿ ದಾಖಲಿಸಿದ ನಂತರ ಅರ್ಜಿಗಳನ್ನು ಪರಿಶೀಲನೆ ನಡೆಸಿದ ವಿವಿಯ ಸ್ಥಳೀಯ ವಿಚಾರಣಾ ಸಮಿತಿ ನಂತರ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೊಸ ಮಾನ್ಯತೆ ಹಾಗೂ ಮಾನ್ಯತೆ ನವೀಕರಣ ಮಾಡುತ್ತಿದ್ದೆವು. ಆದರೆ, ಏಕಾಏಕಿ ವಿವಿ ಈ ಆನ್‌ಲೈನ್ ಪದ್ಧತಿ ಕೈ ಬಿಟ್ಟು, 2020-21 ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಆಫ್‌ಲೈನ್‌ನಲ್ಲಿ ಮುಂದವರಿಸಲು ಕಳೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News