ಯುವಕರು ಸಮಾಜದ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು: ಲೇಖಕ ದ್ವಾರನಕುಂಟೆ ಪಾತಣ್ಣ

Update: 2020-02-21 17:22 GMT

ಬೆಂಗಳೂರು, ಫೆ. 21: ಯುವಕರು ನಿಂತ ನೀರಾಗದೆ ಹರಿಯುವ ನೀರಿನಂತಾಗಬೇಕು. ಸಮಾಜದಲ್ಲಿ ಅನೇಕ ಜ್ವಲಂತ ಸಮಸ್ಯೆಗಳ ಕಡೆಗೆ ಗಮನ ಹರಿಸಬೇಕು ಎಂದು ಲೇಖಕ ದ್ವಾರನಕುಂಟೆ ಪಾತಣ್ಣ ಸಲಹೆ ಮಾಡಿದ್ದಾರೆ.

ಶುಕ್ರವಾರ ಇಲ್ಲಿನ ಪೀಣ್ಯದ ಮಲ್ಲಸಂದ್ರದ ಪೈಪ್‌ಲೈನ್‌ ರಸ್ತೆಯಲ್ಲಿ ಕರುನಾಡ ಯುವಪಡೆಯ ಮೊದಲ ವಾರ್ಷಿಕೋತ್ಸವ, ವೆಬ್‌ಸೈಟ್ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಘಟನೆಯ ಯುವಕರು ತಮ್ಮ ಬದುಕನ್ನು ಕಟ್ಟಿಕೊಂಡು ಕುಟುಂಬದ ಹೊರೆಯನ್ನು ನಿಭಾಯಿಸಿ, ಸಾಮಾಜಿಕ ಕಳಕಳಿ ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದರು.

ಯುವಪಡೆಯ ರಾಜ್ಯಾಧ್ಯಕ್ಷ ಗಿರೀಶ್‌ ಗೌಡ ಮಾತನಾಡಿ, ಸಂಘಟನೆಯಿಂದ ಒಂದು ವರ್ಷದಲ್ಲಿ ಅನೇಕ ಸಮಾಜಮುಖಿ ಕೆಲಸಗಳ ಜೊತೆ ಜೊತೆಗೆ ಜನರಿಗೆ ಆಗುವ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮೂಲಕ ನ್ಯಾಯ ದೊರಕಿಸಿ ಕೊಟ್ಟಿದ್ದೇವೆ ಎಂದರು.

ಸಾಹಿತಿ ನಾರಾಯಣ, ನಾಗರಾಜ ಜಿ.ನಾಗಸಂದ್ರ, ಪ್ರಸನ್ನ ಕುಮಾರ್, ಕಿರುತೆರೆ ನಟಿ ದೀಪಿಕಾ ದಾಸ್, ಗಂಧದಗುಡಿ ನಾಗರಾಜ್, ಶಶಿಕಾಂತರಾವ್, ಮಲ್ಲೇಶ್ ಹಾಗೂ ಪದಾಧಿಕಾರಿಗಳು ಸಮಾರಂಭದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News