×
Ad

ಬಿಎಂಟಿಸಿ: ಬಸ್ ಮಾರ್ಗಗಳಲ್ಲಿ ವಿಸ್ತರಣೆ

Update: 2020-02-22 22:45 IST

ಬೆಂಗಳೂರು, ಫೆ.22: ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕನಕಪುರ ರಸ್ತೆಯಲ್ಲಿನ ನೈಸ್ ರೋಡ್ ಜಂಕ್ಷನ್‌ಗೆ ಮಾತ್ರ ಆಚರಣೆಯಲ್ಲಿದ್ದ ಬಿಎಂಟಿಸಿ ಮಾರ್ಗವನ್ನು ಆರ್ಟ್ ಆಫ್ ಲಿವಿಂಗ್‌ವರೆಗೆ ವಿಸ್ತರಿಸಲಾಗಿದೆ. ಇದರ ಜೊತೆಗೆ ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೀನಾಕ್ಷಿ ಮಾಲ್‌ವರೆಗೆ ಮಾತ್ರ ಸೀಮಿತವಾಗಿದ್ದ ಮಾರ್ಗವನ್ನು ಡಿಎಲ್‌ಎಫ್ ಅಪಾರ್ಟ್‌ಮೆಂಟ್‌ವರೆಗೆ ಫೆ.17ರಿಂದ ವಿಸ್ತರಿಸಲಾಗಿದೆ. ಇದನ್ನು ಪ್ರಯಾಣಿಕರು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.

ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಆರ್ಟ್ ಆಫ್ ಲಿವಿಂಗ್ ಕಡೆಗೆ ಸಂಚರಿಸುವ ಬಸ್‌ಗಳು ಬೆಳಗ್ಗೆ 4.30ರಿಂದ ಪ್ರಾರಂಭಗೊಳ್ಳಲಿದ್ದು, ಪ್ರತಿ ಒಂದು ಗಂಟೆಗೆ ಒಂದು ಬಸ್ ಹೊರಡಲಿದೆ. ಹಾಗೂ ಆರ್ಟ್ ಆಫ್ ಲಿವಿಂಗ್‌ನಿಂದ ಬೆಳಗ್ಗೆ 7.30ರಿಂದ ಬಸ್‌ಗಳು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸಂಚರಿಸಲಿವೆ.

ಹಾಗೆಯೇ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಡಿಎಲ್‌ಎಫ್ ಆಪಾರ್ಟ್‌ಮೆಂಟ್ ಮಾರ್ಗದ ಕಡೆಗೆ ಸಂಚರಿಸುವ ಬಸ್‌ಗಳು ಬೆಳಗ್ಗೆ 5.30ರಿಂದ ಪ್ರಾರಂಭಗೊಂಡು ಪ್ರತಿ ಒಂದು ಗಂಟೆಗೆ ಒಂದರಂತೆ ಸಂಚರಿಸಲಿವೆ. ಹಾಗೂ ಡಿಎಲ್‌ಎಫ್‌ನಿಂದ ಬೆಳಗ್ಗೆ 5.30ರಿಂದಲೇ ಬಸ್ ಸಂಚಾರ ಪ್ರಾರಂಭವಾಗಲಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News