ಕಾಂಗ್ರೆಸ್ ಸೇವಾದಳ ರಾಜ್ಯಾಧ್ಯಕ್ಷರ ನೇಮಕ
Update: 2020-02-22 22:48 IST
ಬೆಂಗಳೂರು, ಫೆ.22: ಕಾಂಗ್ರೆಸ್ ಪಕ್ಷದ ಸೇವಾದಳ ಯಂಗ್ ಬ್ರಿಗೇಡ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಪಿ.ಕೆ.ಜುನೈದ್ ಅನ್ನು ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಮತ್ತು ಜಾತ್ಯತೀತ ವಿಚಾರಧಾರೆಗಳನ್ನು ಪ್ರಚಾರಪಡಿಸಲು 2018ನೇ ಸಾಲಿನ ಆಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಸೇವಾದಳ ಸ್ಥಾಪಿಸಲಾಗಿತ್ತು.
ರಾಜ್ಯ ವ್ಯಾಪ್ತಿ ಸೇವಾದಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಮಂಗಳೂರು ಮೂಲದ ಪಿ.ಕೆ.ಜುನೈದ್ ಅನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಅಖಿಲ ಭಾರತೀಯ ಕಾಂಗ್ರೆಸ್ ಸೇವಾದಳ ಪ್ರಮುಖ ಸಂಚಾಲಕ ಲಾಲ್‌ಜಿ ದೇಸಾಯಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.