ಬೆಂಗಳೂರು: ಟ್ರಂಪ್ ಭಾರತ ಭೇಟಿ ವಿರೋಧಿಸಿ ನಾಳೆ ಪ್ರತಿಭಟನೆ

Update: 2020-02-23 16:35 GMT

ಬೆಂಗಳೂರು, ಫೆ. 23: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿಯನ್ನು ವಿರೋಧಿಸಿ ಎಸ್‌ಯುಸಿಐ ನಾಳೆ(ಫೆ.24) ಬೆಳಗ್ಗೆ 11ಕ್ಕೆ ಇಲ್ಲಿನ ಆನಂದ ರಾವ್ ವೃತ್ತದಲ್ಲಿ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಟ್ರಂಪ್ ಭೇಟಿ ವೇಳೆಯಲ್ಲಿ ಉಭಯ ರಾಷ್ಟ್ರಗಳ ನಡುವೆ ಹಲವು ವ್ಯಾಪಾರ ಮತ್ತು ಮಿಲಿಟರಿ ಒಪ್ಪಂದಗಳು ಅಂಗೀಕಾರವಾಗಲಿವೆ. ಇದು ಕೆಲವು ಕಾರ್ಪೊರೇಟ್ ಮನೆತನಗಳು ಮತ್ತು ಶ್ರೀಮಂತ ವ್ಯಾಪಾರಿಗಳಿಗೆ ಮಾತ್ರ ಅನುಕೂಲಕರವಾಗಿದೆ ಎಂದು ಆರೋಪಿಸಲಾಗಿದೆ.

ಈ ಭೇಟಿಯಿಂದ ದೇಶದ ಸಾಮಾನ್ಯ ಜನರಿಗೆ ಯಾವುದೇ ರೀತಿಯ ಪ್ರಯೋಜನ ಆಗುವುದಿಲ್ಲ. ಜೊತೆಗೆ ಡೊನಾಲ್ಡ್ ಟ್ರಂಪ್, ವಿಶ್ವದಾದ್ಯಂತ ತನ್ನ ಲೂಟಿಕೋರತನ ಮತ್ತು ಮಿಲಿಟರಿ ದಬ್ಬಾಳಿಕೆಗೆ ಕುಖ್ಯಾತವಾಗಿರುವ ಅಮೆರಿಕನ್ ಸಾಮ್ರಾಜ್ಯಶಾಹಿಯ ಪ್ರತಿನಿಧಿಯಾಗಿದ್ದಾರೆ ಎಂದು ಟೀಕಿಸಲಾಗಿದೆ.

ಪ್ರತಿಭಟನೆಯಲ್ಲಿ ಎಸ್‌ಯುಸಿಐನ ರಾಜ್ಯ ಸಮಿತಿ ಸದಸ್ಯ ಟಿ.ಎಸ್.ಸುನೀತ್ ಕುಮಾರ್ ಮಾತನಾಡಲಿದ್ದು, ಅಧ್ಯಕ್ಷತೆಯನ್ನು ರೈತ ಮುಖಂಡ ಎಚ್.ಪಿ.ಶಿವಪ್ರಕಾಶ್ ವಹಿಸಲಿದ್ದಾರೆ ಎಂದು ಎಸ್‌ಯುಸಿಐನ ಎಂ.ಎನ್.ಶ್ರೀರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News