ದಿಲ್ಲಿಯಲ್ಲಿ ನಿಲ್ಲದ ಹಿಂಸಾಚಾರ: ಟಯರ್ ಮಾರುಕಟ್ಟೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

Update: 2020-02-26 10:34 GMT

ಹೊಸದಿಲ್ಲಿ: ಸಿಎಎ ವಿರೋಧಿ ಪ್ರತಿಭಟನಕಾರರ ಮೇಲೆ ಸಿಎಎ ಬೆಂಬಲಿಗರು ನಡೆಸಿದ ದಾಳಿ ಬಳಿಕ ಉಂಟಾದ ಹಿಂಸಾಚಾರ ಮತ್ತಷ್ಟು ಹೆಚ್ಚಾಗಿದ್ದು, ಗೋಕಲ್ ಪುರಿ ಪ್ರದೇಶದಲ್ಲಿ ಟಯರ್ ಮಾರುಕಟ್ಟೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದ ಇಡೀ ಮಾರುಕಟ್ಟೆ ಹೊತ್ತಿ ಉರಿದಿದೆ.

ಇಂದು ನಡೆದ ಹಿಂಸಾಚಾರದಲ್ಲಿ ಕಲ್ಲುತೂರಾಟ ನಡೆದಿದ್ದು, ಅಂಗಡಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿತ್ತು. ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದರೆ, ತಲೆಗೆ ಗಾಯಗೊಂಡಿದ್ದ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಹಿರಿಯ ಪತ್ರಕರ್ತ ಕಾರವಾನ್ ಮ್ಯಾಗಝಿನ್ ಸಂಪಾದದ ವಿನೋದ್ ಜೋಸ್ ತನ್ನ ಫೇಸ್ಬುಕ್ ಪೋಸ್ಟ್ ನಲ್ಲಿ 'ದಿಲ್ಲಿಯಲ್ಲಿ ವ್ಯಾಪಕ ಹಿಂಸಾಚಾರ ಹರಡುತ್ತಿದ್ದು, 2ಕ್ಕೂ ಹೆಚ್ಚು ಜೀವಗಳು ಹೋಗಿದೆ ಎಂದು ಹೇಳಲಾಗುತ್ತಿದೆ. ರಾತ್ರಿ ಹಿಂಸಾಚಾರ ಹೆಚ್ಚಬಹುದೆಂಬ ಆತಂಕದಲ್ಲಿ ದಿಲ್ಲಿ ಜನತೆ ಇದ್ದಾರೆ. ಆದರೆ ಮಾಧ್ಯಮಗಳು ಈ ಬಗ್ಗೆ ವರದಿ ಮಾಡುತ್ತಿಲ್ಲ. ಕೇವಲ ಟ್ರಂಪ್ ಭಾರತ ಪ್ರವಾಸದ ಬಗ್ಗೆ ವರದಿ ಮಾಡುತ್ತಿವೆ ಎಂದು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News