ಫೆ.27: ಜಲಮಂಡಳಿಯಿಂದ ನೀರಿನ ಅದಾಲತ್

Update: 2020-02-25 17:51 GMT

ಬೆಂಗಳೂರು, ಫೆ.25: ಜಲಮಂಡಳಿ ಗುರುವಾರ (ಫೆ.27) ಬೆಳಗ್ಗೆ 9.30ರಿಂದ 11 ಗಂಟೆವರೆಗೆ ನಗರದ ದಕ್ಷಿಣ-4, ಪಶ್ಚಿಮ-4, ನೈರುತ್ಯ-4, ವಾಯವ್ಯ-3, ಈಶಾನ್ಯ-3, ಪೂರ್ವ-4 ಮತ್ತು ವಾಯವ್ಯ-2 ಉಪ ವಿಭಾಗಗಳಲ್ಲಿ ನೀರಿನ ಬಿಲ್, ನೀರು ಮತ್ತು ಒಳಚರಂಡಿ ಸಂಪರ್ಕದಲ್ಲಿನ ವಿಳಂಬ, ಗೃಹಬಳಕೆಯಿಂದ ಗೃಹೇತರ ಪರಿವರ್ತನೆ ವಿಳಂಬ ಮತ್ತಿತರ ಕುಂದುಕೊರತೆಗಳಿಗೆ ಸಂಬಂಧಿಸಿದಂತೆ ಅದಾಲತ್ ಹಮ್ಮಿಕೊಂಡಿದೆ.

ನಾಗರಿಕರು ಉಪ ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕಚೇರಿಯಲ್ಲಿ ನಡೆಯುವ ಅದಾಲತ್‌ನಲ್ಲಿ ಭಾಗವಹಿಸಿ ಹಿರಿಯ ಅಧಿಕಾರಿಗಳಿಂದ ಪರಿಹಾರ ಪಡೆಯಬಹುದಾಗಿದೆ. ಜಲಮಂಡಳಿಯ ಯಾವುದೇ ಕುಂದು ಕೊರತೆಗಳಿಗೆ ಸಂಬಂಧಿಸಿದಂತೆ 24/7 ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ: 22238888, ಸಹಾಯವಾಣಿ:1916 ಹಾಗೂ ವಾಟ್ಸ್‌ಆಪ್ ಸಂಖ್ಯೆ: 8762228888 ಗೆ ಸಂಪರ್ಕಿಸಬಹುದಾಗಿದೆ.

ಉಪವಿಭಾಗ- ಸೇವಾಠಾಣೆಗಳು- ಕಚೇರಿ ವಿಳಾಸ- ದೂರವಾಣಿ ಸಂಖ್ಯೆ ದಕ್ಷಿಣ 4- ಎಚ್.ಎಸ್.ಆರ್ ಲೇಔಟ್, ಕೋಡಿಚಿಕ್ಕನಹಳ್ಳಿ- 2ನೇ ಅಡ್ಡರಸ್ತೆ, 9ನೇ ಮುಖ್ಯ ರಸ್ತೆ, ಬಿ.ಟಿ.ಎಂ 2ನೇ ಹಂತ. ಮಾಹಿತಿಗಾಗಿ ದೂರವಾಣಿ ಸಂಖ್ಯೆ: 40977432. ಪಶ್ಚಿಮ 4- ಚಂದ್ರಲೇಔಟ್-1, ಜಯನಗರ ಒ.ಎಚ್.ಟಿ- ಅರ್ಕಾವತಿ ಭವನ, ನೆಲಮಹಡಿ, 9ನೇ ಅಡ್ಡರಸ್ತೆ, 5ನೇ ಮುಖ್ಯರಸ್ತೆ, ಆರ್.ಪಿ.ಸಿ ಲೇಔಟ್, ಜಯನಗರ 2ನೇ ಹಂತ. ದೂರವಾಣಿ ಸಂಖ್ಯೆ: 23350020

ನೈರುತ್ಯ 4- ಜೆ.ಪಿ.ನಗರ-1, ಜಯನಗರ 4ನೇ ಟಿ.ಬ್ಲಾಕ್, ಜಯನಗರ 4ನೇ ಬ್ಲಾಕ್, ಹೊಂಬೇಗೌಡ ನಗರ, ಭೈರಸಂದ್ರ. -ಕಪಿಲ ಭವನ, 1ನೇ ಮಹಡಿ, 36ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, 4ನೇ ’ಟಿ’ ಬ್ಲಾಕ್, ಹೆಡ್ ಪೋಸ್ಟ್ ಆಫೀಸ್ ಹತ್ತಿರ, ಜಯನಗರ. ದೂರವಾಣಿ ಸಂಖ್ಯೆ: 22945148
ವಾಯವ್ಯ3- ಹೆಗ್ಗನಹಳ್ಳಿ, ಪೀಣ್ಯ ದಾಸರಹಳ್ಳಿ, ಪೀಣ್ಯ. -ನಂ.6, 100 ಅಡಿ ರಸ್ತೆ, ಟಿ..ಎಸ್. ಕ್ರಾಸ್, ಪೀಣ್ಯ 1ನೇ ಹಂತ. ದೂರವಾಣಿ ಸಂಖ್ಯೆ: 28372030

ಈಶಾನ್ಯ 3- ಆರ್.ಟಿ.ನಗರ, ಕಾವಲ್ ಭೈರಸಂದ್ರ, ಸಂಜಯನಗರ, ಬಿ.ಇ.ಎಲ್. ರಸ್ತೆ. -ನಂ.3, 3ನೇ ಅಡ್ಡರಸ್ತೆ, ಪಿಟಿ ಕಾಲೋನಿ, ಆರ್.ಟಿ.ನಗರ. ದೂರವಾಣಿ ಸಂಖ್ಯೆ: 22945139

ಪೂರ್ವ4- ಎ.ನಾರಾಯಣಪುರ, ಜ್ಞಾನ ನಗರ, ಜಗದೀಶ್ ನಗರ, ದೊಡ್ಡನಕುಂದಿ. -ಎ. ನಾರಾಯಣಪುರ ಮುಖ್ಯ ರಸ್ತೆ, ಕೆ.ಆರ್.ಪುರ ರೈಲ್ವೇ ನಿಲ್ದಾಣದ ಎದುರು, ಪಟಾಲಮ್ಮ ದೇವಸ್ಥಾನದ ಹತ್ತಿರ, ಹನುಮಾನ್ ಜಂಕ್ಷನ್, ಎ.ನಾರಾಯಣಪುರ. ದೂರವಾಣಿ ಸಂಖ್ಯೆ: 28510008

ವಾಯವ್ಯ 2- ಕಾಮಾಕ್ಷಿಪಾಳ್ಯ, ಕಮಲಾನಗರ, ಅಗ್ರಹಾರ ದಾಸರಹಳ್ಳಿ, ವೆಸ್ಟ್ ಆಫ್ ಕಾರ್ಡ್ ರಸ್ತೆ 1 ಹಾಗೂ 2 -ಮೋದಿ ಆಸ್ಪತ್ರೆ ಮುಂಭಾಗ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮೀಪುರ. ದೂರವಾಣಿ ಸಂಖ್ಯೆ: 22945184

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News