ಎ.30ರಿಂದ ಮೇ.2ರವರೆಗೆ ಕವಯಿತ್ರಿಯರ ರಾಷ್ಟ್ರಮಟ್ಟದ ಸಮ್ಮೇಳನ

Update: 2020-02-26 18:19 GMT

ಬೆಂಗಳೂರು, ಫೆ.26: ಅಖಿಲ ಭಾರತ ಕವಯಿತ್ರಿಯರ ಸಂಸ್ಥೆಯ ವತಿಯಿಂದ ಎ.30ರಿಂದ ಮೇ.2ರವರೆಗೆ ಕವಯಿತ್ರಿಯರ ರಾಷ್ಟ್ರಮಟ್ಟದ ಸಮ್ಮೇಳನವನ್ನು ಉತ್ತರಪ್ರದೇಶದ ವಾರಣಾಸಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಧಾನ ಸಂಯೋಜಕಿ ಸರಸ್ವತಿ ಚಿಮ್ಮಲಗಿ ತಿಳಿಸಿದರು.

ಬುಧವಾರ ಪ್ರೆಸ್‌ಕ್ಲಬ್ ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನದ ಅಂಗವಾಗಿ ರಾಷ್ಟ್ರವ್ಯಾಪಿ ನನ್ನ ಶ್ರೇಷ್ಠ ಭಾರತ ಹಾಗೂ ಮೋದಿಜಿ ಅವರ ಜೀವನ ಸಾಧನೆ ಕುರಿತು ಕವಿತೆ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 20 ಮಹಿಳೆಯರು ಹಾಗೂ 10 ಮಂದಿ ಪುರುಷರಿಗೆ ಕಾರ್ಯಕ್ರಮದಲ್ಲಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ದೇಶದ ಎಲ್ಲ ಮಹಿಳಾ ಲೇಖಕಿಯರ ಸಮಾಗಮಕ್ಕೆ ವೇದಿಕೆಯಾಗಲಿರುವ ಸಮ್ಮೇಳನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಹಾಗೂ ಇನ್ನಿತರೆ ರಾಜಕೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News