ಬುಡ್ಗಾಂವ್ ನಲ್ಲಿ ಹೆಲಿಕಾಪ್ಟರ್ ಪತನ: ಹುತಾತ್ಮರ ಕುಟುಂಬಕ್ಕೆ ನೀಡಿದ್ದ ಭರವಸೆ ಇನ್ನೂ ಈಡೇರಿಲ್ಲ!

Update: 2020-02-27 17:36 GMT

ಜಮ್ಮುಕಾಶ್ಮೀರ, ಫೆ. 27: ಇಲ್ಲಿನ ಬುಡ್ಗಾಂವ್‌ನಲ್ಲಿ 2019 ಫೆಬ್ರವರಿ 27ರಂದು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಮಿಗ್ 17 ಪತನಗೊಂಡು ಸಂಭವಿಸಿದ ದುರಂತದಲ್ಲಿ ಮೃತಪಟ್ಟ 6 ಮಂದಿ ಸಿಬ್ಬಂದಿಯ ಕುಟುಂಬಿಕರಿಗೆ ನೀಡಿದ ಭರವಸೆಯನ್ನು ಸರಕಾರ ಇದುವರೆಗೆ ಈಡೇರಿಸಿಲ್ಲ.

 ಬಾಲಕೋಟ್ ವಾಯುದಾಳಿ ಬಳಿಕ ಈ ದುರಂತ ಸಂಭವಿಸಿತ್ತು. ಈ ದುರಂತದಲ್ಲಿ ಐಎಎಫ್‌ನ 6 ಮಂದಿ ಸಿಬ್ಬಂದಿ ಹಾಗೂ ಓರ್ವ ನಾಗರಿಕ ಮೃತಪಟ್ಟಿದ್ದ. ಅನಂತರ ಈ ಘಟನೆ ಬಗ್ಗೆ ತನಿಖೆ ಕೈಗೊಳ್ಳಲಾಗಿತ್ತು. ತನಿಖೆಯಲ್ಲಿ ಮಿಗ್ 17 ಅನ್ನು ಐಎಎಫ್‌ನ ಕ್ಷಿಪಣಿಯೇ ಹೊಡೆದುರುಳಿಸಿದೇ ಎಂಬ ವಿಚಾರ ಬಹಿರಂಗಗೊಂಡಿತ್ತು.

 ‘ಇದು ನಮ್ಮಿಂದ ಆದ ಅತಿ ದೊಡ್ಡ ಪ್ರಮಾದ’ ಎಂದು ಐಎಐಫ್‌ನ ವರಿಷ್ಠರು ಹೇಳಿದ್ದರು. ಆಗ ಕೇಂದ್ರ ಸರಕಾರ ಹಾಗೂ ಭಾರತೀಯ ವಾಯು ಪಡೆ ಮೃತಪಟ್ಟವರ ಸಿಬ್ಬಂದಿಯ ಕುಟುಂಬಿಕರಿಗೆ ಹಲವು ಭರವಸೆ ನೀಡಿತ್ತು. ಆದರೆ, ಘಟನೆ ನಡೆದು ಒಂದು ವರ್ಷ ಕಳೆದರೂ ನೀಡಿದ ಭರವಸೆ ಈಡೇರಿಸಿಲ್ಲ. ನಾವು ಅವರನ್ನು ಸಂಪರ್ಕಿಸಿದ್ದೇವೆ. ಆದರೆ, ಅವರು ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳುತ್ತಾರೆ. ಆದರೆ, ಏನನ್ನೂ ಮಾಡಿಲ್ಲ. ಜಿಲ್ಲಾಡಳಿತ ಕೂಡ ನೀಡಿದ ಭರವಸೆ ಈಡೇರಿಸಿಲ್ಲ ಎಂದು ದುರಂತದಲ್ಲ್ಲಿ ಮೃತಪಟ್ಟ ಪಂಕಜ್ ಕುಮಾರ್ ಸಹೋದರ ಅಜಯ್ ಸಿಂಗ್ ಹೇಳಿದ್ದಾರೆ.

 ‘‘ಅವರು ಕೂಡ ಶೌರ್ಯ ಪ್ರದರ್ಶಿಸಿದ್ದಾರೆ. ಅವರಿಗೆ ಕೂಡ ಹುತಾತ್ಮ ಎಂಬ ಬಿರುದು ಖಂಡಿತ ಒಪ್ಪುತ್ತದೆ. ಅವರಿಗೆ ಪರಮ ವೀರ ಚಕ್ರ ಪ್ರಶಸ್ತಿ ನೀಡಬೇಕು’’ ಎಂದು ಪಂಕಜ್ ಕುಮಾರ್ ತಂದೆ ವಿಜಯ್ ಶಂಕರ್ ಪಾಂಡೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News