ಕೊರೋನ ಸೋಂಕು: ಇರಾನ್ ನಲ್ಲಿ ಮೃತರ ಸಂಖ್ಯೆ 26ಕ್ಕೆ ಏರಿಕೆ, ಉಪಾಧ್ಯಕ್ಷರಿಗೆ ಸೋಂಕು ದೃಢ

Update: 2020-02-28 04:14 GMT
ಇರಾನ್ ಉಪಾಧ್ಯಕ್ಷೆ ಮಸ್ಸೂಮ್ ಇಬ್ತಿಕಾರ್

ಟೆಹ್ರಾನ್, ಫೆ.28: ಇರಾನ್‌ನಲ್ಲಿ ಮಾರಕ ಕೊರೋನ ವೈರಸ್ ಸೋಂಕಿಗೆ 26 ಮಂದಿ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ಪ್ರಕಟಿಸಿದೆ. ಉಪಾಧ್ಯಕ್ಷರೇ ವೈರಸ್ ಸೋಂಕಿನಿಂದ ಬಳಲುತ್ತಿರುವುದನ್ನು ಸಚಿವಾಲಯ ದೃಢಪಟಿಸಿದೆ.

ದೇಶದಲ್ಲಿ ಮತ್ತೆ 106 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 245 ಆಗಿದೆ. ಫೆಬ್ರವರಿ 19ರಂದು ಮೊದಲ ಪ್ರಕರಣ ದಾಖಲಾದ ಬಳಿಕ ಗರಿಷ್ಠ ಸಂಖ್ಯೆಯ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಕಿಯಾನುಶ್ ಜಹಾನ್‌ಪುರ ಹೇಳಿದ್ದಾರೆ. ಚೀನಾ ಹೊರತುಪಡಿಸಿದರೆ ಗರಿಷ್ಠ ಸಂಖ್ಯೆಯ ಮಂದಿ ಮೃತಪಟ್ಟ ದೇಶ ಇದಾಗಿದೆ.

ಇರಾನ್‌ನ ಏಳು ಮಂದಿ ಉಪಾಧ್ಯಕ್ಷರ ಪೈಕಿ ಒಬ್ಬರಾದ ಮಹಿಳಾ ವ್ಯವಹಾರಗಳ ಖಾತೆ ನೋಡಿಕೊಳ್ಳುತ್ತಿರುವ ಮಸ್ಸೂಮ್ ಇಬ್ತಿಕಾರ್ ಅವರಿಗೆ ಸೋಂಕು ತಗುಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಅವರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಾಂಗ ವ್ಯವಹಾರ ವಿಭಾಗದ ಮುಖ್ಯಸ್ಥ ಮುಜ್ತಬಾ ಝೊಲ್ನೂರ್ ಅವರಿಗೆ ಕೂಡಾ ಸೋಂಕು ತಗುಲಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News