ನಾನು ಅನುರಾಗ್ ಠಾಕೂರ್, ಕಪಿಲ್ ಮಿಶ್ರಾರನ್ನು ಬಂಧಿಸುತ್ತಿದ್ದೆ: ದೆಹಲಿ ಮಾಜಿ ಪೊಲೀಸ್ ಆಯುಕ್ತ ಅಜಯ್ ಶರ್ಮಾ

Update: 2020-02-29 03:44 GMT
ಫೋಟೊ : thewire.in

ಹೊಸದಿಲ್ಲಿ : "ನಾನು ದೆಹಲಿ ಪೊಲೀಸ್ ಆಯುಕ್ತನಾಗಿ ಇರುತ್ತಿದ್ದರೆ ದೆಹಲಿ ಗಲಭೆ ಹಿನ್ನೆಲೆಯಲ್ಲಿ ಅನುರಾಗ್ ಠಾಕೂರ್, ಪರ್ವೇಶ್ ವರ್ಮಾ ಮತ್ತು ಕಪಿಲ್ ಮಿಶ್ರಾ ಅವರನ್ನು ಬಂಧಿಸುತ್ತಿದ್ದೆ" ಎಂದು ದೆಹಲಿಯ ಮಾಜಿ ಪೊಲೀಸ್ ಆಯುಕ್ತ ಮತ್ತು ಗಡಿ ಭದ್ರತಾ ಪಡೆಯ ಮಾಜಿ ಮಹಾನಿರ್ದೇಶಕ ಅಜಯ್ ರಾಜ್ ಶರ್ಮಾ ಹೇಳಿದ್ದಾರೆ.

ದೆಹಲಿ ಪೊಲೀಸರು ಹೆಚ್ಚು ಕೋಮುವಾದಿಗಳಾಗುತ್ತಿದ್ದಾರೆ ಎಂಬ ಆತಂಕವನ್ನೂ ಅವರು ಸಂದರ್ಶನವೊಂದರಲ್ಲಿ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊ ತುಣುಕುಗಳಲ್ಲಿ ದೆಹಲಿ ಗಲಭೆಯ ವೇಳೆ ಅವರ ನಡವಳಿಕೆಗಳನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಪೊಲೀಸ್ ಆಯಕ್ತರಾದ ಅಮೂಲ್ಯ ಪಟ್ನಾಯಕ್ ಕಠಿಣ ಪರೀಕ್ಷೆ ಎದುರಿಸಿದರು; ಆದರೆ ಅನುತ್ತೀರ್ಣರಾದರು. ಪೊಲೀಸರು ದೆಹಲಿ ಗಲಭೆಯನ್ನು ವ್ಯವಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸಿರಲಿಲ್ಲ. ದೆಹಲಿ ಪೊಲೀಸರು ಪರಿಸ್ಥಿತಿಗಳನ್ನು ಸಮರ್ಪಕವಾಗಿ ನಿರ್ವಹಿಸದಿರುವ ಇತಿಹಾಸ ಡಿಸೆಂಬರ್ ನ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಘಟನೆಯಷ್ಟು ಹಿಂದಕ್ಕೆ ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

'ದಿ ವೈರ್‌' ಕರಣ್ ಥಾಪರ್ ಅವರಿಗೆ ನೀಡಿದ 35 ನಿಮಿಷಗಳ ಸಂದರ್ಶನದಲ್ಲಿ ಶರ್ಮಾ, ಪೊಲೀಸರ ವೃತ್ತಿಪರತೆಯಲ್ಲಿ ಕೊರತೆ ಇರುವುದು ದೊಡ್ಡ ಸಮಸ್ಯೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರು ನೀಡಿರುವ ಹೇಳಿಕೆ ವಾಸ್ತವ ಎಂದು ಹೇಳಿದರು.

ಪರಿಸ್ಥಿತಿ ಹದಗೆಟ್ಟು, ದೊಂಬಿಯಾಗಿ ಮಾರ್ಪಡಲು ಪೊಲೀಸರೇ ಅವಕಾಶ ನೀಡಿದರು. ಅವರು ಆರಂಭಿಕ ಹಂತದಲ್ಲೇ ಕ್ರಮ ಕೈಗೊಂಡಿದ್ದರೆ ಇದನ್ನು ತಡೆಯಬಹುದಿತ್ತು. ಪೊಲೀಸರು ಮಾಡಿದ ಮೊದಲು ತಪ್ಪೆಂದರೆ ಶಹೀನ್ ಬಾಗ್‌ನಲ್ಲಿ ಸಭೆಗೆ ಅನುಮತಿ ನೀಡಿದ್ದು ಹಾಗೂ ಅದು ಮುಂದುವರಿಯಲು ಅವಕಾಶ ಮಾಡಿಕೊಟ್ಟದ್ದು. ಈ ಸಭೆ ಕಾನೂನಿನ ಸ್ಪಷ್ಟ ಉಲ್ಲಂಘನೆ. ಅದು ಸಾರ್ವಜನಿಕ ಜಾಗದಲ್ಲಿ ನಡೆದಿದ್ದು, ರಸ್ತೆ ತಡೆ ನಡೆಸಿ ಅನಾನುಕೂಲ ಮಾಡಲು ಯಾರಿಗೂ ಹಕ್ಕು ಇಲ್ಲ ಎಂದು ಪ್ರತಿಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News