ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನ

Update: 2020-03-01 16:43 GMT

ಬೆಂಗಳೂರು, ಮಾ.1: ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ ನಡೆಸುವ ಸ್ನಾತಕೋತ್ತರ ಪದವಿಗಳಾದ ಎಂ.ಎಸ್ಸಿ ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಕೋರ್ಸುಗಳ 2ನೇ ಸೆಮಿಸ್ಟರ್ ಪಠ್ಯಕ್ರಮವನ್ನು ಬೋಧಿಸಲು ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇರೆಗೆ ಅತಿಥಿ ಉಪನ್ಯಾಸಕರನ್ನು ಉಪಯೋಗಿಸಿಕೊಳ್ಳಲು ಅರ್ಜಿಗಳನ್ನು ಅಹ್ವಾನಿಸಿದೆ.

ಅರ್ಹತೆ: ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಶ ಶೇ.55 ಅಂಕಗಳನ್ನು ಪಡೆದಿರಬೇಕು. ಪಿಎಚ್‌ಡಿ, ಎಂಫಿಲ್, ನೆಟ್, ಸ್ಲೆಟ್ ಮತ್ತು ಸ್ನಾತಕೋತ್ತರ ಬೋಧನಾ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಅರ್ಜಿ ಹಾಗೂ ಆಗತ್ಯ ದಾಖಲೆಗಳನ್ನು ಕುಲಸಚಿವರು, ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯ, ಬೆಂಗಳೂರು-560 001 ಇಲ್ಲಿಗೆ ಮಾ.11ರೊಳಗೆ ಸಲ್ಲಿಸಬೇಕು.

ಅರ್ಜಿ ಪ್ರತಿಗಳನ್ನು registrarbcu@gmail.com ಇಲ್ಲಿಗೆ ಕಳುಹಿಸಬಹುದು. ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ, ಸಮಯ ಮತ್ತು ಸ್ಥಳದಲ್ಲಿ ಆಯ್ಕೆ ಸಮಿತಿಯ ಸಂದರ್ಶನಕ್ಕೆ ಹಾಜರಾಗುಲು ಪೋಸ್ಟ್ ಮೂಲಕ ತಿಳಿಸಲಾಗುತ್ತದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News