ಇಂಗ್ಲೆಂಡ್ ಸೆಮಿ ಫೈನಲ್‌ಗೆ

Update: 2020-03-02 04:39 GMT

 ಸಿಡ್ನಿ, ಮಾ.1: ನ್ಯಾಟ್ ಸಿವೆರ್ ಅರ್ಧಶತಕ ಹಾಗೂ ಸ್ಪಿನ್ನರ್‌ಗಳ ಅಮೋಘ ಬೌಲಿಂಗ್ ಪ್ರದರ್ಶನದ ನೆರವಿನಿಂದ ಇಂಗ್ಲೆಂಡ್ ತಂಡ ವೆಸ್ಟ್‌ಇಂಡೀಸ್ ವಿರುದ್ಧ 46 ರನ್‌ಗಳ ಜಯ ಸಾಧಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

 ಆಲ್‌ರೌಂಡರ್ ಸಿವೆರ್ ಟೂರ್ನಿಯಲ್ಲಿ 3ನೇ ಅರ್ಧಶತಕ ಸಿಡಿಸುವುದರೊಂದಿಗೆ ಇಂಗ್ಲೆಂಡ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 143 ರನ್ ಗಳಿಸಲು ನೆರವಾದರು. ಇಂಗ್ಲೆಂಡ್‌ನ ಸ್ಕೋರ್‌ಗೆ ಉತ್ತರವಾಗಿ ವಿಂಡೀಸ್ ಕೇವಲ 97 ರನ್‌ಗೆ ಆಲೌಟಾಯಿತು. ಮೂವರು ಸ್ಪಿನ್ನರ್‌ಗಳಾದ ಸೋಫಿ ಎಕ್ಲೆಸ್ಟೋನ್(3-7), ಸಾರ್ಹಾ ಗ್ಲೆನ್(2-16) ಹಾಗೂ ಮ್ಯಾಡಿ ವಿಲ್ಲರ್ಸ್(1-30)ಆರು ವಿಕೆಟ್ ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News