ಕುವೈತ್ ನಲ್ಲಿ ಹಲಾ ಕಪ್ - 2020 ಕ್ರಿಕೆಟ್ ಪಂದ್ಯಾವಳಿ: ‘ಶೈನಿಂಗ್ ಮಂಗಳೂರು’ ಚಾಂಪಿಯನ್

Update: 2020-03-02 05:23 GMT

ಕುವೈತ್, ಮಾ.2: ಮಹಬೂಲ ಕಿಂಗ್ಸ್ ಕ್ರಿಕೆಟ್ ಕ್ಲಬ್  ವತಿಯಿಂದ ಕುವೈತ್ ರಾಷ್ಟೀಯ ದಿನದ ಪ್ರಯುಕ್ತ  ಫೆ.25 ಮತ್ತು 26ರಂದು ಹಲಾ  ಕಪ್-2020  ನಾಕೌಟ್ ಶೈಲಿಯ ಕ್ರಿಕೆಟ್ ಪಂದ್ಯಾಟವು ಇಲ್ಲಿನ ಮಹಬೂಲ ಕಡಲ ಕಿನಾರೆಯ ಕ್ರೀಡಾಂಗಣದಲ್ಲಿ ನಡೆಯಿತು.

ಕ್ರೀಡಾಭಿಮಾನಿ ನವೀನ್ ಡಿಸೋಜ ಮುಂಬೈ ನೇತೃತ್ವದಲ್ಲಿ ನಡೆದ ಪಂದ್ಯಾಟದಲ್ಲಿ ಕುವೈತ್ ನ 16 ತಂ‌ಡಗಳು ಭಾಗವಹಿಸಿದ್ದವು.

ಮಹೂಬಲ ಕಿಂಗ್ಸ್ ಮತ್ತು ಮಾರ್ನಿಂಗ್ ಸ್ಟಾರ್ ನಡುವೆ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಮಾರ್ನಿಂಗ್ ಸ್ಟಾರ್ ಜಯ ಗಳಿಸಿ ಫೈನಲ್ ಪ್ರವೇಶಿಸಿದರೆ, ಫೈರ್ ಬಾಯ್ಸ್ ತಂಡವನ್ನು ಸೋಲಿಸಿ ಶೈನಿಂಗ್  ಮಂಗಳೂರು  ತಂಡವೂ ಪೈನಲ್ ಗೆ ಲಗ್ಗೆ ಇಟ್ಟಿತು.

ಪೈನಲ್ ಪಂದ್ಯಾಟದಲ್ಲಿ ಟಾಸ್ ಗೆದ್ದ ಶೈನಿಂಗ್ ಮಂಗಳೂರು ತಂಡ ಫೀಲ್ಡಿಂಗ್  ಆಯ್ದುಕೊಂಡಿತು. ಮಾರ್ನಿಂಗ್ ಸ್ಟಾರ್ ನಿಗದಿತ 8 ಓವರ್ ಗಳಲ್ಲಿ ರಾಜು 22 ಮತ್ತು ಲಾಂಬರವರ 18 ರನ್ನುಗಳ ಸಹಾಯದಿಂದ 4 ವಿಕೆಟ್ ನಷ್ಟಕ್ಕೆ 71 ರನ್ನುಗಳನ್ನು ಗಳಿಸಿತು. ಶೈನಿಂಗ್ ಮಂಗಳೂರು ತಂಡದ ಬೌಲರ್ ಅಬೂ 2 ಓವರ್ ಗಳಲ್ಲಿ 10 ರನ್ ನೀಡಿ ಎರಡು ವಿಕೆಟ್ ಗಳನ್ನು ಪಡೆದರು.

72 ರನ್ನುಗಳ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಶೈನಿಂಗ್ ಮಂಗಳೂರು ತಂಡವೂ ರಿಪಾಝ್ ಮಲಿಕ್ ರಂತಡ್ಕರವರ 13 ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಹಿತ ಸಿಡಿಸಿದ 33 ರನ್ ಗಳ ನೆರವಿನಿಂದ ಇನ್ನೂ ಒಂದು ಓವರ್ ಬಾಕಿ ಉಳಿದಿರುವಂತೆ ವಿಜಯದ ರನ್ ಗಳಿಸಿ  ಚಾಂಪಿಯನ್ ಆಗಿ ಹೊರಹೊಮ್ಮಿತು.

ಫೈನಲ್ ಪಂದ್ಯದ ಶ್ರೇಷ್ಠ ಆಟಗಾರನಾಗಿ ರಿಫಾಝ್ ಮಲಿಕ್ ರಂತಡ್ಕ, ಉತ್ತಮ ಎಸೆತಗಾರನಾಗಿ ಶೈನಿಂಗ್ ಮಂಗಳೂರು ತಂಡದ  ಅಬೂ ಮತ್ತು ಶ್ರೇಷ್ಠ ದಾಂಡಿಗನಾಗಿ ಮಾರ್ನಿಂಗ್ ಸ್ಟಾರ್ ನ ಲಾಂಬಾ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.‌

ಅಮಲ್ ಮುಸ್ತಾಕ್ಬಲ್ ಫ಼ಾಹಹೀಲ್ ಮೊಬೈಲ್ ಡೀಲರ್ ಆಗಿರುವ ಮಂಗಳೂರು ಮೂಲದ ಯುವ ಉದ್ಯಮಿ ಮುಹಮ್ಮದ್ ಶರೀಫ್ ನಾಯಕತ್ವದ ಶೈನಿಂಗ್ ಮಂಗಳೂರು ತಂಡವೂ ಕುವೈತ್ ನ ಬಲಿಷ್ಠ ತಂಡವಾಗಿದ್ದೂ, ಈ ಮೊದಲು ಹಲವಾರು ಪಂದ್ಯಾಕೂಟದಲ್ಲಿ ಪ್ರಶಸ್ತಿ ಗಳನ್ನು ತನ್ನದಾಗಿಸಿಕೊಂಡಿದೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸುನೀಲ್ ಡಿಸೋಜ, ಬದ್ರುಲ್ ಮುನೀರ್ ಮತ್ತು ಅಕ್ಬರ್ (ತರಪಡೋಸ್ ಕಾನ) ಕೃಷ್ಣಾಪುರ    ಉಪಸ್ಥಿತರಿದ್ದರು.

  ತಮೀಂ ಉಳ್ಳಾಲ್  ವೀಕ್ಷಕ ವಿವರಕರಾಗಿ ಸಹಕರಿಸಿದರು. ನವೀನ್ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News