×
Ad

ಸೌಂದರ್ಯ ಸ್ಪರ್ಧೆ ವಿಜೇತೆ ಕುಮಾರಿ ಅಡ್ಲೀನ್ ಕ್ಯಾಸ್ಟಲಿನೋಗೆ ಸಿಎಂ ಅಭಿನಂದನೆ

Update: 2020-03-02 23:38 IST

ಬೆಂಗಳೂರು, ಮಾ. 2: ಲೀವಾ ಮಿಸ್ ದೀವಾ ಸೌಂದರ್ಯ ಸ್ಪರ್ಧೆ ವಿಜೇತೆ ಉಡುಪಿಯ ಕುಮಾರಿ ಅಡ್ಲೀನ್ ಕ್ಯಾಸ್ಟಲಿನೊ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.

ಸೋಮವಾರ ವಿಧಾನಸೌಧದಲ್ಲಿ ಬಿಎಸ್‌ವೈ ಅವರನ್ನು ಭೇಟಿ ಮಾಡಿದ ಕನ್ನಡತಿ ಕುಮಾರಿ ಅಡ್ಲೀನ್ ಕ್ಯಾಸ್ಟಲಿನೋ ಅವರನ್ನು ಅಭಿನಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿಯೂ ಸಫಲರಾಗುವಂತೆ ಶುಭ ಹಾರೈಸಿದರು.

ಅಡ್ಲೀನ್ ಕ್ಯಾಸ್ಟಲಿನೋ ಭಾರತದ ಸಾವಿರಾರು ಚೆಲುವೆಯರನ್ನು ಹಿಂದಿಕ್ಕಿ ವಜ್ರ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಕರಾವಳಿ ಜಿಲ್ಲೆ ಉಡುಪಿಯ ಉದ್ಯಾವರ ಕೊರಂಗ್ರಪಾಡಿ ನಿವಾಸಿಯಾಗಿರುವ ಅಡ್ಲೀನ್ ರವಿವಾರ ಹುಟ್ಟೂರಿಗೆ ಆಗಮಿಸಿದ್ದರು. ತಮ್ಮ ಸ್ವಂತ ಮನೆ ಮತ್ತು ದೊಡ್ಡಮ್ಮನ ಮನೆಗೆ ಬಂದು ಸಂತಸ ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News