ಈ ತಪ್ಪಿಗಾಗಿ 'ಐಫೋನ್' ಗ್ರಾಹಕರಿಗೆ 3,625 ಕೋಟಿ ರೂ. ನೀಡಲಿದೆ 'ಆ್ಯಪಲ್' !

Update: 2020-03-03 11:29 GMT

ಹೊಸದಿಲ್ಲಿ: ಗ್ರಾಹಕರು ನೂತನ ಐಫೋನ್ ಗಳನ್ನು ಖರೀದಿಸುವಂತೆ ಮಾಡಲು ಹಳೆಯ ಐಫೋನ್ ಗಳು ನಿಧಾನವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿರುವ ಪ್ರಕರಣದಲ್ಲಿ 500 ಮಿಲಿಯನ್ ಡಾಲರ್ (3625 ಕೋಟಿ ರೂ.)ಗಳನ್ನು ಗ್ರಾಹಕರಿಗೆ ವಿತರಿಸಲು ಆ್ಯಪಲ್ ಮುಂದಾಗಿದೆ.

ಈ ಒಪ್ಪಂದದ ಪ್ರಕಾರ ಆ್ಯಪಲ್ ತೊಂದರೆಗೊಳಗಾದ ನಿರ್ದಿಷ್ಟ ಐಫೋನ್ ಮಾಡೆಲ್ ಗಳ ಬಳಕೆದಾರರಿಗೆ ತಲಾ 25 ಡಾಲರ್ ಅಂದರೆ 1,800 ರೂ.ಗಳನ್ನು ವಿತರಿಸಲಿದೆ. ಈ ಮೊತ್ತವು 310 ಮಿಲಿಯನ್ ಡಾಲರ್ ನಿಂದ 500 ಮಿಲಿಯನ್ ಡಾಲರ್ ಆಗುವ ಸಾಧ್ಯತೆ ಇದೆ.

ಹಳೆಯ ಫೋನ್ ಗಳನ್ನು ನಿಧಾನಗೊಳಿಸಲು ಸಾಫ್ಟ್ ವೇರ್ ಅಪ್ ಡೇಟ್ ಒಂದನ್ನು ತಾನು ಬಳಸಿದ್ದಾಗಿ ಕಂಪೆನಿಯು 2017ರ ಡಿಸೆಂಬರ್ ನಲ್ಲಿ ಒಪ್ಪಿಕೊಂಡಿತ್ತು. ಈ ಮೂಲಕ ಗ್ರಾಹಕರು ಹೊಸ ಐಫೋನ್ ಗಳನ್ನು ಖರೀದಿಸುವಂತೆ ಮಾಡುವುದು ಕಂಪೆನಿಯ ಉದ್ದೇಶವಾಗಿತ್ತು ಎನ್ನುವ ಆರೋಪಗಳು ಕೇಳಿಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News