ಹಾಕಿ ವರ್ಷದ ಆಟಗಾರ ಪ್ರಶಸ್ತಿಗೆ ಮನ್‌ಪ್ರೀತ್, ರಾಣಿ ನಾಮನಿರ್ದೇಶನ

Update: 2020-03-03 18:03 GMT

ಹೊಸದಿಲ್ಲಿ, ಮಾ.3: ಭಾರತದ ಪುರುಷರ ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಮತ್ತು ಮಹಿಳಾ ತಂಡದ ನಾಯಕಿ ರಾಣಿ ರಾಂಪಾಲ್ ಮಂಗಳವಾರ ಧ್ರುವ ಬಾತ್ರಾ ವರ್ಷದ ಆಟಗಾರರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

 ವರ್ಷದ ಆಟಗಾರರ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 8ರಂದು ನಡೆಯಲಿದೆ.

 ಹಾಕಿ ಸ್ಟಾರ್‌ಗಳಿಗೆ ಒಟ್ಟು 1.30 ಕೋಟಿ ರೂ. ಮೊತ್ತದ ಪ್ರಶಸ್ತಿ ಮತ್ತು ಟ್ರೋಫಿ ಪ್ರದಾನ ಮಾಡಲಾಗುವುದು. 2019ರಲ್ಲಿ ಕ್ರೀಡಾ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಆಟಗಾರರನ್ನು ನಾಮನಿರ್ದೇಶನ ಮಾಡಲಾಗಿದೆ.

ಮನ್‌ಪ್ರೀತ್ ಎಫ್‌ಐಎಚ್ ವರ್ಷದ ಆಟಗಾರರ ಪ್ರಶಸ್ತಿಗೆ ಆಯ್ಕೆ ಯಾಗುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದರು. ಅವರು ಭಾರತ ತಂಡವನ್ನು ಟೋಕಿಯೋ ಒಲಿಂಪಿಕ್ಸ್ ಗೆ ತಲುಪಿಸಿದ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ನಾಯಕಿ ರಾಣಿ ರಾಂಪಾಲ್ ವರ್ಷದ ವರ್ಲ್ಡ್ ಗೇಮ್ಸ್ ಅಥ್ಲೀಟ್ ಪ್ರಶಸ್ತಿ ಜಯಿಸಿದ ಭಾರತದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News