ಮೊದಲ ಟ್ವೆಂಟಿ-20: ಐರ್ಲೆಂಡ್ ವಿರುದ್ಧ ಅಫ್ಘಾನ್‌ಗೆ ಜಯ

Update: 2020-03-06 18:43 GMT

ಗ್ರೇಟರ್ ನೊಯ್ಡ, ಮಾ.6: ಅಫ್ಘಾನಿಸ್ತಾನ ತಂಡ ಶುಕ್ರವಾರ ಇಲ್ಲಿ ನಡೆದ ಮಳೆ ಬಾಧಿತ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಐರ್ಲೆಂಡ್‌ಗೆ ಆಘಾತ ನೀಡಿದೆ. ಈ ಮೂಲಕ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಅಫ್ಘಾನಿಸ್ತಾನ ತಂಡ ಡಕ್‌ವರ್ತ್ ಲೂವಿಸ್ ನಿಯಮದ ಪ್ರಕಾರ 11 ರನ್‌ಗಳಿಂದ ಜಯ ಸಾಧಿಸಿತು. ಗೆಲ್ಲಲು ಕಠಿಣ ಗುರಿ ಪಡೆದಿದ್ದ ಅಫ್ಘಾನಿಸ್ತಾನ ತಂಡ ಮಳೆಯಿಂದಾಗಿ ಪಂದ್ಯ ನಿಂತಾಗ 15 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 133 ರನ್ ಗಳಿಸಿತ್ತು. ಡಿಎಲ್ ನಿಯಮದ ಪ್ರಕಾರ ಅಫ್ಘಾನ್ ತಂಡ 15 ಓವರ್‌ಗಳ ಅಂತ್ಯಕ್ಕೆ 123 ರನ್ ಗಳಿಸಬೇಕಾಗಿತ್ತು. ನಜೀಬುಲ್ಲಾ ಝದ್ರಾನ್ (ಔಟಾಗದೆ 42 ರನ್, 21 ಎಸೆತ, 3 ಬೌಂಡರಿ, 2 ಸಿಕ್ಸರ್)ಅಫ್ಘಾನ್ ತಂಡಕ್ಕೆ ಗೆಲುವು ತಂದುಕೊಟ್ಟರು. ಗುರ್ಬಾಝ್(28), ಶಿನ್ವಾರಿ(28) ಹಾಗೂ ಝಝೈ(23)ಎರಡಂಕೆಯ ಸ್ಕೋರ್ ಗಳಿಸಿದರು.

 ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಐರ್ಲೆಂಡ್ ತಂಡ ಪಾಲ್ ಸ್ಟರ್ಲಿಂಗ್ ಸಿಡಿಸಿದ ಮಿಂಚಿನ ಅರ್ಧಶತಕದ(60, 41 ಎಸೆತ, 8 ಬೌಂಡರಿ, 2 ಸಿಕ್ಸರ್) ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಆರು ವಿಕೆಟ್‌ಗಳ ನಷ್ಟಕ್ಕೆ 172 ರನ್ ಗಳಿಸಿತು. ಐಪಿಎಲ್‌ನ ಸ್ಟಾರ್ ಸ್ಪಿನ್ ಬೌಲರ್ ರಶೀದ್ ಖಾನ್(3-22) ಮೂರು ವಿಕೆಟ್‌ಗಳನ್ನು ಪಡೆದು ಐರ್ಲೆಂಡ್‌ಗೆ ಕಡಿವಾಣ ಹಾಕಿದರು. ಮುಜೀಬ್ ವುರ್ ರಹ್ಮಾನ್ ಹಾಗೂ ಶಾಪೂರ್ ಝದ್ರಾನ್ ಹೆಚ್ಚು ರನ್ ಸೋರಿಕೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News