ನಕಲಿ ಮಾಸ್ಕ್ ಮಾರಾಟ ಜಾಲ ಪತ್ತೆ: ಹಲವು ಮಾಸ್ಕ್ ಗಳು ಜಪ್ತಿ
Update: 2020-03-07 22:38 IST
ಬೆಂಗಳೂರು, ಮಾ.6: ಕೊರೋನ ವೈರಸ್ ನೆಪವಾಗಿಟ್ಟುಕೊಂಡು ನಕಲಿ ಮಾಸ್ಕ್ ಮಾರಾಟ ಜಾಲವನ್ನು ಭೇದಿಸಿರುವ ರಾಜ್ಯ ವಾಣಿಜ್ಯ ತೆರಿಗೆ ಜಾರಿ ಅಧಿಕಾರಿಗಳು, ಹಲವು ಮಾಸ್ಕ್‌ಗಳನ್ನು ಜಪ್ತಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಕೊರೋನ ವೈರಸ್ ಹಿನ್ನೆಲೆಯಲ್ಲಿ ಮೆಡಿಕಲ್ ಶಾಪ್ ಹಾಗೂ ಸಗಟು ಮಾರಾಟ ಮಳಿಗೆಗಳಲ್ಲಿ ಮಾಸ್ಕ್‌ಗಳನ್ನು ಸಂಗ್ರಹಿಸಿ ಕೃತಕ ಅಭಾವ ಸೃಷ್ಟಿಸುವುದು ಮತ್ತು ದುಬಾರಿ ಬೆಲೆಗೆ ಮಾರಾಟ ಮಾಡುವುದರ ವಿರುದ್ಧ ಶನಿವಾರ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರು.
ಬೆಂಗಳೂರು ನಗರದ ನಾನಾ ಭಾಗಗಳಲ್ಲಿ ಹೆಚ್ಚುವರಿಯಾಗಿ ಶೇಖರಣೆ ಮಾಡಿದ್ದ ಮಾಸ್ಕ್‌ಗಳನ್ನು ಜಪ್ತಿ ಮಾಡಿದ್ದು, ಕೆಲ ಮಾಲಕರಿಗೆ ದಂಡ ವಿಧಿಸಿದ್ದಾರೆ. ಹಲವೆಡೆ ನಕಲಿ ಮಾಸ್ಕ್‌ಗಳನ್ನು ವಶಕ್ಕೆ ಪಡೆದು ಸಂಬಂಧಪಟ್ಟವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲು ಮಾಡಿದ್ದಾರೆ.