ಕೆಸಿಎಫ್ ಒಮಾನ್ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ: ಸೊಹಾರ್ ಝೋನ್ ಚಾಂಪಿಯನ್

Update: 2020-03-07 17:36 GMT

ಒಮಾನ್: ಕರ್ನಾಟಕ ಕಲ್ಚರಲ್ ಫೌಂಡೇಷನ್ ಒಮಾನ್ ಇದರ ವತಿಯಿಂದ 3ನೇ ಆವೃತ್ತಿಯ ರಾಷ್ಟ್ರೀಯ ಮಟ್ಟದ ಪ್ರತಿಭೋತ್ಸವ - 2019 ವು ನಿಝ್ವ ದ ಹೈತುರಾತ್ ನ ಅಲ್ ಬುಸ್ತಾನ್ ಫಾರ್ಮ್ ಹೌಸ್ ನಲ್ಲಿ ಶುಕ್ರವಾರ ನಡೆಯಿತು. 

ಏಳು ಝೋನ್ ಗಳನ್ನು (ಮಸ್ಕತ್, ಬೌಶರ್, ಸೊಹಾರ್, ನಿಝ್ವ, ಸೀಬ್, ಸಲಾಲ, ಬುರೈಮಿ) ಒಳಗೊಂಡ ಪ್ರತಿಭೋತ್ಸವದಲ್ಲಿ ಕೆಸಿಎಫ್ ಸೊಹಾರ್ ಝೋನ್ ಚಾಂಪಿಯನ್ ಪಟ್ಟವನ್ನು ಉಳಿಸಿಕೊಂಡರೆ, ದ್ವಿತೀಯ ಸ್ಥಾನವನ್ನು ಕೆಸಿಎಫ್ ಸೀಬ್ ಝೋನ್, ತೃತೀಯ ಸ್ಥಾನವನ್ನು ಕೆಸಿಎಫ್ ಬೌಶರ್ ಝೋನ್ ಪಡೆದುಕೊಂಡಿತು. ವೈಯಕ್ತಿಕ ಚಾಂಪಿಯನ್ ಅನ್ನು ಕೆಸಿಎಫ್ ಸೊಹಾರ್ ಝೋನ್ ನ ಆರಿಫ್ ಮದಕ ಗಿಟ್ಟಿಸಿಕೊಂಡರು.

ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಜನಾಬ್ ಅಯ್ಯೂಬ್ ಕೊಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರೋಪ ಸಮಾರಂಭದ 
ಉದ್ಘಾಟನೆಯನ್ನು ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿಯ ಶಿಕ್ಷಣ ವಿಭಾಗದ ಕಾರ್ಯದರ್ಶಿ ಉಮರ್ ಸಖಾಫಿ ಮಿತ್ತೂರ್, ಪ್ರಾಸ್ತಾವಿಕ ಭಾಷಣವನ್ನು ಕೆಸಿಎಫ್ ಒಮಾನ್ ಇದರ ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ ಇವರು ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಸಯ್ಯಿದ್ ಮುಹಮ್ಮದ್ ಇಲ್ಯಾಸ್ ಅಹ್ಸನಿ ಅಲ್ ಜೀಲಾನಿ ನಿಝ್ವ, ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿಯ ಆಡಳಿತ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ, ಹಾಗೂ ಸಂಘಟನಾ ಅಧ್ಯಕ್ಷ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ಕೊಡಗು, ಕೋಶಾಧಿಕಾರಿ ಆರಿಫ್ ಕೊಡಿ, ಶಿಕ್ಷಣ ವಿಭಾಗದ ಅಧ್ಯಕ್ಷ ಉಬೈದುಲ್ಲಾ ಸಖಾಫಿ, ಹಂಝ ಹಾಜಿ ಕನ್ನಂಗಾರ್, ಇಬ್ರಾಹಿಮ್ ಅತ್ರಾಡಿ, ಶಮೀರ್ ಉಸ್ತಾದ್ ಹೂಡೆ, ಖಾಸಿಂ ಹಾಜಿ, ನಿಝ್ವ ಝೋನ್ ಅಧ್ಯಕ್ಷ ಬಾಷ‌ ತೀರ್ಥಹಳ್ಳಿ, ಪ್ರತಿಭೋತ್ಸವ ಸ್ವಾಗತ ಸಮಿತಿ ಚೆಯರ್ಮೆನ್ ಅಬ್ಬಾಸ್ ಮರಕಡ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ವಿವಿಧ ವಿಭಾಗದ ಕಾರ್ಯದರ್ಶಿಗಳಾದ ಸಂಶದ್ದೀನ್ ಪಾಲ್ತಡ್ಕ, ಸಿದ್ದೀಕ್ ಮಾಂಬ್ಲಿ ಸುಳ್ಯ, ಅಶ್ರಫ್ ಭಾರತ್ ಸುಳ್ಯ, ಇಕ್ಬಾಲ್ ಎರ್ಮಾಲ್, ಇರ್ಫಾನ್ ಕೂರ್ನಡ್ಕ, ಹಾಗೂ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ನಾಯಕರ ಮತ್ತು ವಿವಿಧ ಝೋನ್ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಫ್ಯಾಮಿಲಿ ಮೀಟ್ ಮತ್ತು ಮಹಿಳೆಯರ ಮತ್ತು ಮಕ್ಕಳ ವಿಭಾಗದ ಸ್ಪರ್ಧಾತ್ಮಕ ಕಾರ್ಯಕ್ರಮ ನಡೆಯಿತು. ಸ್ವಾಗತ ಸಮಿತಿ  ಕನ್ವೀನರ್  ಝುಬೈರ್ ಸಅದಿ ಪಾಟ್ರಕೋಡಿ ಸ್ವಾಗತಿಸಿ, ಕಲಂದರ್ ಬಾವ ಪರಪ್ಪು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಕೆಸಿಎಫ್ ನಿಝ್ವ ಝೋನ್ ಸಮಿತಿಯರು ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News