×
Ad

ಅನುದಾನ ಕೊರತೆ ಹಿನ್ನೆಲೆ ಪೊಲೀಸರಿಗೆ ವೇತನ ವಿಳಂಬ: ಚರ್ಚೆಗೆ ಗ್ರಾಸವಾದ 'ಪೊಲೀಸ್ ಆಯುಕ್ತ'ರ ವೈರಲ್ ಫ್ಯಾಕ್ಸ್ ಸಂದೇಶ

Update: 2020-03-07 23:09 IST

ಬೆಂಗಳೂರು, ಮಾ.7: ರಾಜ್ಯ ಸರಕಾರದ ಅನುದಾನ ಕೊರತೆ ಹಿನ್ನೆಲೆ ಪೊಲೀಸರಿಗೆ ವೇತನ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ್ ಹೆಸರಿನ ಫ್ಯಾಕ್ಸ್‌ವೊಂದು ಚರ್ಚೆಗೆ ಗ್ರಾಸವಾಗಿದೆ.

ಫೆಬ್ರವರಿ ತಿಂಗಳ ಸಂಬಳ ಅನುದಾನದ ಕೊರತೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಇಂದು ನಡೆಯುವ ಬ್ರೀಫ್ ಸಭೆಯಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗೆ ವೇತನ ವಿಳಂಬವಾಗುವ ಬಗ್ಗೆ ಗಮನಕ್ಕೆ ತನ್ನಿ ಎಂದು ಪೊಲೀಸ್ ಆಯುಕ್ತರು ಫ್ಯಾಕ್ಸ್ ಮೂಲಕ ಡಿಸಿಪಿ, ಎಸಿಪಿ ಮತ್ತು ಇನ್ಸ್‌ಪೆಕ್ಟರ್‌ಗಳಿಗೆ ರವಾನೆ ಮಾಡಿದ್ದಾರೆ ಎನ್ನಲಾಗಿದೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆಯಲ್ಲಿಯೇ ಈ ಫ್ಯಾಕ್ಸ್ ಹೊರಬಂದಿದ್ದು, ಸರಕಾರ ಮತ್ತು ಇಲಾಖೆ ಬಳಿ ಹಣ ಇಲ್ಲವೇ ಎನ್ನುವ ಅನಮಾನ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

‘ವೇತನ ನೀಡಿ, ಇಲ್ಲ ಆಯುಕ್ತರ ಕಚೇರಿಗೆ ಮುತ್ತಿಗೆ’

ಫೆಬ್ರವರಿ ಮಾಸದ ವೇತನ ಪೊಲೀಸ್ ಸಿಬ್ಬಂದಿಗೆ ಇನ್ನೂ ಕೈ ಸೇರಿಲ್ಲ. ಇದರಿಂದ ರಾಜ್ಯ ಸರಕಾರ ದಿವಾಳಿಯಾಗಿದೆ ಎನ್ನುವುದು ತೋರಿಸುತ್ತದೆ. ಈ ವಾರದೊಳಗೆ ಸಿಬ್ಬಂದಿಗೆ ವೇತನ ಬಂದಿಲ್ಲ ಎಂದರೆ, ಪೊಲೀಸ್ ಆಯುಕ್ತರ ಕಚೇರಿಗೆ ಸಿಬ್ಬಂದಿ ಕುಟುಂಬಸ್ಥರು ಮುತ್ತಿಗೆ ಹಾಕಲಿದ್ದಾರೆ.

-ಶಶಿಧರ್, ಅಧ್ಯಕ್ಷ, ಪೊಲೀಸ್ ಮಹಾಸಂಘ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News