ಯೆಚೂರಿಯನ್ನು ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ನಿರಾಕರಿಸಿದ ಪಾಲಿಟ್ ಬ್ಯುರೋ

Update: 2020-03-09 10:18 GMT

ಹೊಸದಿಲ್ಲಿ: ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರನ್ನು ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಕಳುಹಿಸಬೇಕೆಂದು ಆ ರಾಜ್ಯದಲ್ಲಿನ ಪಕ್ಷದ ಘಟಕ ತುದಿಗಾಲಲ್ಲಿ ನಿಂತಿದ್ದರೂ ಪಕ್ಷದ ಪಾಲಿಟ್ ಬ್ಯುರೋ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ರಾಜಕೀಯ ಅನಿವಾರ್ಯತೆ ಹಾಗೂ ರಾಜ್ಯಸಭಾ ನಾಮಕರಣಕ್ಕೆ ಪಕ್ಷದಲ್ಲಿರುವ ನಿಯಮಾವಳಿಗಳನ್ನು ಮುಂದಿಟ್ಟು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.  ಈ ನಿರ್ಧಾರ ಕೈಗೊಂಡ ಪಾಲಿಟ್ ಬ್ಯುರೋ ಸಭೆಯಲ್ಲಿ ಒಟ್ಟು 17 ಸದಸ್ಯರ ಪೈಕಿ ಕೇವಲ ಒಂಬತ್ತು ಮಂದಿ ಹಾಜರಿದ್ದರು.

ಇತ್ತೀಚೆಗೆ ತಿರುವನಂತಪುರಂನಲ್ಲಿ ನಡೆದ ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ಯೆಚೂರಿ ಹೆಸರನ್ನು ಅನೌಪಚಾರಿಕವಾಗಿ ಪ್ರಸ್ತಾಪಿಸಲಾಗಿತ್ತು ಯೆಚೂರಿ ರಾಜ್ಯಸಭೆಗೆ ನಾಮಕರಣಗೊಳ್ಳಬೇಕಿದ್ದರೆ ಪಕ್ಷಕ್ಕೆ ಕಾಂಗ್ರೆಸ್ ಬೆಂಬಲ ಅಗತ್ಯವಾಗಿತ್ತು. ಆದರೆ ಕಾಂಗ್ರೆಸ್ ಪಕ್ಷವನ್ನು ಅವಲಂಬಿಸುವುದು ಹಲವು ಪಾಲಿಟ್ ಬ್ಯುರೋ ಸದಸ್ಯರಿಗೆ ಬೇಡವಾಗಿತ್ತೆನ್ನಲಾಗಿದೆ.

ಸದ್ಯ ಎಡ ಪಕ್ಷಗಳು ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಒಟ್ಟು 28 ಸ್ಥಾನಗಳನ್ನು ಹೊಂದಿವೆ. ಆದರೆ ರಾಜ್ಯಸಭೆಗೆ ತನ್ನ ಅಭ್ಯರ್ಥಿಯನ್ನು ಕಳುಹಿಸಲು ಪಕ್ಷಕ್ಕೆ ಪಟ್ಟು 46 ಸದಸ್ಯರ ಮತಗಳು ಬೇಕಾಗಿವೆ.

ಯೆಚೂರಿ ಅವರು 2005ರಿಂದ 2017ರ ತನಕ ರಾಜ್ಯಸಭಾ ಸದಸ್ಯರಾಗಿದ್ದರು. 2017ರಲ್ಲಿ  ಕಾಂಗ್ರೆಸ್ ಬೆಂಬಲ ನೀಡಿದ್ದ ಹೊರತಾಗಿಯೂ ಸಿಪಿಎಂ ಅವರನ್ನು ಪಶ್ಚಿಮ ಬಂಗಾಳದಿಂದ ರಾಜ್ಯಸಭೆಗೆ ಕಳುಹಿಸಲು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News