ಮೋಹನ್ ಭಾಗವತ್ ಹತ್ಯೆ ಸಂಚು ಖಂಡನೀಯ: ಸಚಿವ ಬಿ.ಸಿ.ಪಾಟೀಲ್
Update: 2020-03-09 17:36 IST
ಬೆಂಗಳೂರು, ಮಾ. 9: ಆರೆಸೆಸ್ಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹತ್ಯೆ ಸಂಚು ಖಂಡನೀಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಸೋಮವಾರ ಅಧಿವೇಶನಕ್ಕೆ ತೆರಳುವ ಮುನ್ನ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಷ್ಟ್ರೀಯವಾದಿಗಳ ಮೇಲಿನ ಹತ್ಯೆಗೆ ಸಂಚು ವಿಚಾರ ಗುಪ್ತಚರ ಇಲಾಖೆ ನೀಡಿದೆ ಎಂದು ಗೊತ್ತಾಗಿದೆ. ಈ ಬಗ್ಗೆ ಗೃಹ ಇಲಾಖೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು.