ದುಬೈ: ಬದ್ರಿಯಾ ಫ್ರೆಂಡ್ಸ್, ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ತುರ್ತು ರಕ್ತದಾನ ಶಿಬಿರ

Update: 2020-03-10 06:41 GMT

ದುಬೈ : ಲತೀಫಾ ಆಸ್ಪತ್ರೆ ದುಬೈಯಲ್ಲಿ ರಕ್ತದ ಕೊರತೆ ಇದೆ ಎಂಬ ಮಾಹಿತಿಯನ್ನು ಆಸ್ಪತ್ರೆಯ ಮೇಲ್ವಿಚಾರಕರು ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಬದ್ರಿಯಾ ಫ್ರೆಂಡ್ಸ್ ಯುಎಇ ಇದರ ಕಾರ್ಯನಿರ್ವಾಹಕರಿಗೆ ತಿಳಿಸಿದ ವೇಳೆ ತಕ್ಷಣ ಕಾರ್ಯ ಪ್ರವೃತ್ತರಾದ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ವಾಟ್ಸ್ಆ್ಯಪ್ ಸಂದೇಶಕ್ಕೆ 30ಕ್ಕೂ ಅಧಿಕ ಅನಿವಾಸಿ ಭಾರತೀಯರು ತಮ್ಮ ಕೆಲಸದ ನಡುವೆ ಬಿಡುವನ್ನು ಮಾಡಿಕೊಂಡು ರಕ್ತದಾನ ಮಾಡಿದರು.

ತುರ್ತು ರಕ್ತದ ಅಗತ್ಯ ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವದಾನಿಗಳಾದ ಅನಿವಾಸಿ ಭಾರತೀಯರಿಗೆ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯು ಅಭಿನಂದನೆ ಸಲ್ಲಿಸಿತು.

ಮಾ.10ರಂದು ರಕ್ತದ ಅವಶ್ಯಕತೆ ಇದೆ. ಅನಿವಾಸಿ ಭಾರತೀಯರು ರಕ್ತದಾನ ಮಾಡುವುದಾದರೆ ಅಬ್ದುಲ್ ರಹ್ಮಾನ್ 052 9007432, ಎಸ್.ಕೆ.ಸಮೀರ್ 052 9007436,ಅನ್ವರ್ ಸಾದತ್ 050 8857076, ಅಬು ನಷ್ವಾನ್ 055 9008516 ಅವರನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News