5.8 ಶತಕೋಟಿ ಡಾಲರ್ ನಷ್ಟ: ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟ ಕಳೆದುಕೊಂಡ ಮುಕೇಶ್ ಅಂಬಾನಿ

Update: 2020-03-10 11:00 GMT

ಮುಂಬೈ: ತೈಲ ಬೆಲೆಗಳಲ್ಲಿ ಭಾರೀ ಕುಸಿತದ ಜತೆಗೆ ಕೊರೊನಾ ವೈರಸ್ ನಿಂದ ಜಾಗತಿಕವಾಗಿ ಷೇರುಪೇಟೆಯಲ್ಲಿ ಉಂಟಾಗಿರುವ ತಲ್ಲಣದಿಂದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ತಾವು ಈ ಹಿಂದೆ ಹೊಂದಿದ್ದ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿ ಪಟ್ಟವನ್ನು ಕಳೆದುಕೊಂಡಿದ್ದಾರೆ.

ಇದೀಗ ಈ  ಸ್ಥಾನ ಆಲಿಬಾಬಾ ಗ್ರೂಪ್ ಹೋಲ್ಡಿಂಗ್ ಲಿಮಿಟೆಡ್ ಸ್ಥಾಪಕ ಜ್ಯಾಕ್ ಮಾ ಅವರ ಪಾಲಿಗೆ ಒಲಿದಿದೆ.

ಮುಕೇಶ್ ಅಂಬಾನಿಯ ಒಟ್ಟು ಸಂಪತ್ತಿನ ಮೌಲ್ಯದಲ್ಲಿ 5.8 ಶತಕೋಟಿ ಡಾಲರ್  ಸೋಮವಾರ ಒಂದೇ ದಿನದಲ್ಲಿ ಕಡಿಮೆಯಾಗಿದ್ದು, ಅವರೀಗ ಬ್ಲೂಂಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ನಲ್ಲಿ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ನಂ. 1 ಸ್ಥಾನದಲ್ಲಿರುವ ಜ್ಯಾಕ್ ಮಾ ಅವರ ಒಟ್ಟು ಸಂಪತ್ತಿನ ಮೌಲ್ಯ 44.5 ಶತಕೋಟಿ ಡಾಲರ್ ಆಗಿದ್ದು ಅಂಬಾನಿ ಒಟ್ಟು ಸಂಪತ್ತಿನ ಮೌಲ್ಯಕ್ಕಿಂತ 2.6 ಶತಕೋಟಿ ಡಾಲರ್ ಹೆಚ್ಚಿನ ಸಂಪತ್ತಿನ ಒಡೆಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News