ದೇವರಾಜ ಅರಸು ವಸತಿ ಯೋಜನೆಗೆ ಜಿಲ್ಲಾವಾರು ಸಮಿತಿ ರಚನೆ: ಸಚಿವ ವಿ.ಸೋಮಣ್ಣ

Update: 2020-03-11 17:19 GMT

ಬೆಂಗಳೂರು, ಮಾ.11: ವಿಕಲಚೇತನರು, ಎಚ್‌ಐವಿ ಸೋಂಕಿತರು, ದೇವದಾಸಿಗಳು, ತೃತೀಯ ಲಿಂಗಿಗಳು, ಅಲೆಮಾರಿ ಸೇರಿದಂತೆ ಪ್ರಮುಖರಿಗೆ ದೇವರಾಜ ಅರಸು ವಸತಿ ಯೋಜನೆಯಲ್ಲಿ ಅನುದಾನ ಬಿಡುಗಡೆಗೆ ಜಿಲ್ಲಾವಾರು ಸಮಿತಿ ರಚನೆ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.

ಬುಧವಾರ ವಿಧಾನ ಪರಿಷತ್‌ನಲ್ಲಿ ಮಧ್ಯಾಹ್ನ ಭೋಜನ ನಂತರ ಆರಂಭವಾದ ಪ್ರಶ್ನೋತ್ತರ ವೇಳೆಯಲ್ಲಿ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

ವಿಶೇಷ ವರ್ಗದ ಜನರಿಗೆ ಯಾವುದೇ ರೀತಿಯ ಸೌಲಭ್ಯ ಒದಗಿಸದೆ, ಆತ್ಮವಂಚನೆ ಮಾಡಲ್ಲ. ಆದ್ಯತೆ ಮೇರೆಗೆ ತುರ್ತು ಹಣ ಬಿಡುಗಡೆ ಮಾಡುವಂತೆ ಈಗಾಗಲೇ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಕಳೆದ 5 ವರ್ಷಗಳಲ್ಲಿ ಒಟ್ಟು 68115 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈ ಪೈಕಿ 41207 ಮನೆಗಳು ಪೂರ್ಣಗೊಂಡಿವೆ. 6020 ಮನೆಗಳು ತಳಪಾಯ ಹಂತದಲ್ಲಿ 3744 ಮನೆಗಳು ಗೋಡೆ ಹಂತದಲ್ಲಿ, 4206 ಮನೆಗಳು ಛಾವಣಿ ಹಂತದಲ್ಲಿವೆ. ಉಳಿದಂತೆ 1975 ಫಲಾನುಭವಿಗಳಿಗೆ ಸಾಕಷ್ಟು ಕಾಲಾವಕಾಶ ನೀಡಲಾಗಿತ್ತು. ಆದರೆ, ಮನೆಗಳನ್ನು ಪ್ರಾರಂಭಿಸಲಾಗದ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News