ಕೊರೋನ ವೈರಸ್ ಭೀತಿಯಲ್ಲೂ ಬಿಬಿಎಂಪಿಯಲ್ಲಿ ಬಯೋಮೆಟ್ರಿಕ್ ಮುಂದುವರಿಕೆ

Update: 2020-03-12 13:12 GMT

ಬೆಂಗಳೂರು, ಮಾ.12: ಕೊರೋನ ವೈರಸ್ ಭೀತಿಯ ನಡುವೆಯೂ ಬಿಬಿಎಂಪಿ ತನ್ನ ಸಿಬ್ಬಂದಿ ಹಾಜರಾತಿಗಾಗಿ ಈಗಲೂ ಬಯೋಮೆಟ್ರಿಕ್ ಪದ್ಧತಿಯನ್ನು ಮುಂದುವರಿಕೆ ಮಾಡಿದ್ದು, ಸಿಬ್ಬಂದಿಯಲ್ಲಿ ಆತಂಕ ಉಂಟುಮಾಡಿದೆ.

ಬಿಬಿಎಂಪಿ ಕೇಂದ್ರ ಕಚೇರಿ, ಬ್ಯಾಟರಾಯನಪುರ, ತ್ಯಾಗರಾಜನಗರ ಎಲ್ಲ ಕಡೆ ಬಯೋಮೆಟ್ರಿಕ್ ಮೂಲಕ ಹಾಜರಾತಿ ಪಡೆಯಲಾಗುತ್ತಿದೆ. ಇದು ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಆತಂಕಕ್ಕೆ ಕಾರಣವಾಗಿದೆ. ಇಡೀ ನಗರಕ್ಕೆ ಮುನ್ನೆಚ್ಚರಿಕೆ ಬಗ್ಗೆ ಅರಿವು ನೀಡುತ್ತಿರುವ ಬಿಬಿಎಂಪಿ, ಬಯೋಮೆಟ್ರಿಕ್ ಮುಂದುವರಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮೇಯರ್ ಗೌತಮ್ ಕುಮಾರ್, ಹಾಜರಾತಿಗಾಗಿ ಈಗಲೂ ಬಯೋಮೆಟ್ರಿಕ್ ಬಳಸುತ್ತಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಆಯುಕ್ತರು, ಆಡಳಿತ ವಿಭಾಗದ ವಿಶೇಷ ಆಯುಕ್ತರು, ಈ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಒಂದೊಮ್ಮೆ ಬಯೋಮೆಟ್ರಿಕ್ ವ್ಯವಸ್ಥೆ ತೆಗೆದರೆ ದುರ್ಬಳಕೆ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News