ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

Update: 2020-03-13 18:24 GMT

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ರ್ಯಾಂಕರ್ ಸ್ಕಾಲರ್ ಆಪ್ಟಿಟ್ಯೂಡ್ ಟೆಸ್ಟ್ (ಆರ್‌ಎಸ್‌ಎಟಿ) 2020

ವಿವರ: 12ನೇ ತರಗತಿ ತೇರ್ಗಡೆಯಾಗಿರುವ/ ಪರೀಕ್ಷೆಗೆ ಹಾಜರಾಗಿರುವ ವಿದ್ಯಾರ್ಥಿಗಳು ಅಥವಾ ಪದವೀಧರರಿಗೆ ಉನ್ನತ ವಿದ್ಯಾಭ್ಯಾಸಕ್ಕೆ ಹಲವು ಪುರಸ್ಕಾರಗಳ ಮೂಲಕ ಅವಕಾಶ ಕಲ್ಪಿಸುವ ಉದ್ದೇಶದಿಂದ ರ್ಯಾಂಕರ್ ಸ್ಕಾಲರ್ ಆಪ್ಟಿಟ್ಯೂಡ್ ಟೆಸ್ಟ್ (ಆರ್‌ಎಸ್‌ಎಟಿ) ಈ ಸ್ಕಾಲರ್‌ಶಿಪ್ ಘೋಷಿಸಿದೆ.

ಅರ್ಹತೆ: ಈ ಶೈಕ್ಷಣಿಕ ವರ್ಷದಲ್ಲಿ 12ನೇ ತರಗತಿ ತೇರ್ಗಡೆಯಾಗಿರುವ ಅಥವಾ ಪರೀಕ್ಷೆಗೆ ಹಾಜರಾಗಲಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ಬಹುಮಾನ ಹಾಗೂ ಇತರ ಕೊಡುಗೆ ನೀಡಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 20, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/RSA3

*************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಅಶೋಕ ಯುನಿವರ್ಸಿಟಿ ಯಂಗ್‌ಇಂಡಿಯಾ ಫೆಲೊಶಿಪ್ 2020

ವಿವರ: ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಹರ್ಯಾಣದ ಅಶೋಕ ವಿಶ್ವವಿದ್ಯಾನಿಲಯ ಈ ಸ್ಕಾಲರ್‌ಶಿಪ್ ಘೋಷಿಸಿದೆ. ಪ್ರತಿಭಾವಂತ ಯುವಜನತೆಯನ್ನು ಗುರುತಿಸಿ ಆಯ್ಕೆ ಮಾಡುವ ಉದ್ದೇಶವಿದೆ.

ಅರ್ಹತೆ: ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಕಲಿಯುತ್ತಿರುವ, 28 ವರ್ಷಕ್ಕಿಂತ ಕೆಳಹರೆಯದ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ವಿದ್ಯಾರ್ಥಿಗಳು ಲಿಬರಲ್ ಸ್ಟಡೀಸ್‌ನಲ್ಲಿ ಒಂದು ವರ್ಷದ ಸ್ನಾತಕೋತ್ತರ ಡಿಪ್ಲೊಮಾ ಅಧ್ಯಯನಕ್ಕೆ ದಾಖಲಾತಿ ಪಡೆಯುವ ಜೊತೆಗೆ ಶೇ.25ರಿಂದ ಶೇ.100ರಷ್ಟು ಶುಲ್ಕ ಮನ್ನಾದ ಸೌಲಭ್ಯ ಪಡೆಯುತ್ತಾರೆ.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/AUS3

**************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಕೆಸಿ ಮಹೀಂದ್ರ ಸ್ಕಾಲರ್‌ಶಿಪ್ ಫಾರ್ ಪೋಸ್ಟ್ ಗ್ರಾಜುವೇಟ್ ಸ್ಟಡೀಸ್ ಅಬ್ರಾಡ್-2020

ವಿವರ:  ವಿದೇಶದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸಲು ಆಸಕ್ತಿ ಇರುವ ಭಾರತದ ಪದವಿ ವಿದ್ಯಾರ್ಥಿಗಳಿಗೆ ಕೆಸಿ ಮಹೀಂದ್ರ ಎಜುಕೇಶನ್ ಟ್ರಸ್ಟ್ ನೀಡುವ ಸ್ಕಾಲರ್‌ಶಿಪ್ ಇದಾಗಿದೆ. ಅರ್ಹ ಮತ್ತು ನೆರವಿನ ಅಗತ್ಯವಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮುಂದುರಿಸಲು ನೆರವಾಗುವ ಉದ್ದೇಶವಿದೆ.

ಅರ್ಹತೆ: ವಿದೇಶದ ಪ್ರತಿಷ್ಠಿತ ವಿವಿಯಲ್ಲಿ 2020ರ ಆಗಸ್ಟ್ ನಿಂದ ಆರಂಭವಾಗುವ ಸ್ನಾತಕೋತ್ತರ ಪದವಿ ಕಾರ್ಯಕ್ರಮಕ್ಕೆ ಪ್ರವೇಶ ಪಡೆದಿರುವ ಅಥವಾ ಪ್ರವೇಶಕ್ಕೆ ಅರ್ಜಿ ಸಲ್ಲಿಸಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾನ್ಯತೆ ಪಡೆದ ವಿವಿಯಿಂದ ಪ್ರಥಮ ದರ್ಜೆಯಲ್ಲಿ ಪದವಿ ಅಥವಾ ತತ್ಸಮಾನ ಡಿಪ್ಲೊಮಾ ಪದವಿ ಪಡೆದಿರಬೇಕು.

ನೆರವು: ಆಯ್ಕೆಯಾದ ಪ್ರಥಮ ಮೂರು ವಿದ್ಯಾರ್ಥಿಗಳಿಗೆ 8 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ಒದಗಿಸಲಾಗುವುದು. ಉಳಿದ ಯಶಸ್ವಿ ಅರ್ಜಿದಾರರಿಗೆ 4 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/KCM1

**************

ವಿದ್ಯಾರ್ಥಿವೇತನ

(ರಾಷ್ಟ್ರೀಯ ಮಟ್ಟ):

ಮೇಧಾವಿ ನ್ಯಾಷನಲ್ ಸ್ಕಾಲರ್‌ಶಿಪ್ ಸ್ಕೀಂ 2020

ವಿವರ: 16-40 ವರ್ಷದ, 10ನೇ ತರಗತಿ ತೇರ್ಗಡೆಯಾಗಿರುವ ವಿದ್ಯಾರ್ಥಿಗಳು ಮೇಧಾವಿ ನ್ಯಾಷನಲ್ ಸ್ಕಾಲರ್‌ಶಿಪ್ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಹತೆ: ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ತಿಂಗಳಿಗೆ 8,000 ರೂ.ವರೆಗಿನ ಸ್ಕಾಲರ್‌ಶಿಪ್ ಹಾಗೂ ಇತರ ಸೌಲಭ್ಯ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/MNS1

***************

ವಿದ್ಯಾರ್ಥಿವೇತನ

(ಅರ್ಹತೆ ಆಧಾರಿತ):

ಫುಲ್‌ಬ್ರೈಟ್ ಟೀಚಿಂಗ್ ಎಕ್ಸಲೆನ್ಸ್ ಆ್ಯಂಡ್ ಅಚೀವ್‌ಮೆಂಟ್ ಪ್ರೋಗ್ರಾಂ 2020-21

ವಿವರ: ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್ ಫೌಂಡೇಶನ್(ಯುಎಸ್‌ಐಇಎಫ್) ಹಾಗೂ ಅಮೆರಿಕದ ವಿದೇಶ ಇಲಾಖೆಯ ಬ್ಯೂರೊ ಆಫ್ ಎಜುಕೇಷನಲ್ ಆ್ಯಂಡ್ ಕಲ್ಚರಲ್ ಅಫೇರ್ಸ್‌ನ ಸಹಯೋಗದಲ್ಲಿ ಈ 6 ವಾರಗಳ ಪದವಿಯೇತರ, ನಾನ್-ಕ್ರೆಡಿಟ್ ಶೈಕ್ಷಣಿಕ ಕಾರ್ಯಕ್ರಮ ನಡೆಯಲಿದೆ. ಅಮೆರಿಕದ ವಿವಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾರತದ ಹಿರಿಯ ಮಾಧ್ಯಮಿಕ ಶಾಲೆಯ ಪೂರ್ಣಾವಧಿ ಶಿಕ್ಷಕರು ಪಾಲ್ಗೊಳ್ಳಬಹುದು.

ಅರ್ಹತೆ: ಭಾರತದ 6ರಿಂದ 12ನೇ ತರಗತಿವರೆಗಿನ ಹಿರಿಯ ಮಾಧ್ಯಮಿಕ ಶಾಲೆಯ ಪೂರ್ಣಾವಧಿ ಶಿಕ್ಷಕರು ಪಾಲ್ಗೊಳ್ಳಬಹುದು. ಪದವಿಯ ಜೊತೆಗೆ 5 ರ್ಷದ ಅನುಭವ ಹೊಂದಿರಬೇಕು.

ನೆರವು: ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಮೆರಿಕಕ್ಕೆ ಹೋಗಿ ಬರುವ ಮತ್ತು ಅಮೆರಿಕದಲ್ಲಿ ಪ್ರಯಾಣಿಸುವ ವಿಮಾನ ದರ, ವೀಸಾ, ಕಾರ್ಯಕ್ರಮ ಶುಲ್ಕ ಪಾವತಿ, ವಿಮೆ, ಲಗ್ಗೇಜ್ ಭತ್ತೆ ಹಾಗೂ ಇತರ ಸೌಲಭ್ಯ ಒದಗಿಸಲಾಗುವುದು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 16, 2020

ಅರ್ಜಿ: ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಜಾಲತಾಣ: http://www.b4s.in/bharati/FTE3

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News