ಭಾರತೀಯ ಅಂಚೆ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ; ಯಾರು ಅರ್ಜಿ ಸಲ್ಲಿಸಬಹದು?
Photo : PTI
ಅಭ್ಯರ್ಥಿಗಳು 10ನೇ ತರಗತಿಯನ್ನು ಗಣಿತ, ಇಂಗ್ಲಿಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಯಲ್ಲಿ ಪಾಸಾಗಿರಬೇಕು. ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
ಭಾರತ ಅಂಚೆ ಇಲಾಖೆಯು ಇಂಡಿಯಾ ಪೋಸ್ಟ್ ಗ್ರಾಮೀಣ್ ಡಾಕ್ ಸೇವಾ ಜಿಡಿಎಸ್ ಪೋಸ್ಟ್ ಗೆ ನೇಮಕಾತಿಗಾಗಿ ಅಧಿಕೃತ ವೆಬ್‌ಸೈಟ್‌ನಲ್ಲಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ನೇಮಕಾತಿ ಸುಮಾರು 28000+ ಹುದ್ದೆಗಳಿಗೆ ಆಗುತ್ತಿದೆ. ಭಾರತ ಅಂಚೆ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಯು 2026 ಜನವರಿ 31ರಂದು ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು 2026 ಫೆಬ್ರವರಿ 14ರವರೆಗೆ ಅರ್ಜಿ ಸಲ್ಲಿಸಬಹುದು. ಅಗತ್ಯವಿರುವ ಕನಿಷ್ಠ ವಯಸ್ಸು 2026 ಜನವರಿ 01ರಂತೆ 18 ವರ್ಷಗಳು ಮತ್ತು ಗರಿಷ್ಠ ವಯಸ್ಸು 40 ವರ್ಷಗಳು. ಅಭ್ಯರ್ಥಿಗಳು ಭಾರತ ಅಂಚೆ ಜಿಡಿಎಸ್ ನೇಮಕಾತಿ 2026 ಗಾಗಿ ಸಂಪೂರ್ಣ ವಿವರಗಳನ್ನು ಕೆಳಗೆ ಪರಿಶೀಲಿಸಬೇಕು. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಲಿಂಕ್ನಲ್ಲಿ ಅರ್ಜಿ ಸಲ್ಲಿಸಬಹುದು:
https://indiapost.gov.in/gdsonlineengagement
► ಪ್ರಮುಖ ದಿನಾಂಕಗಳು
* ಅಧಿಸೂಚನೆ ದಿನಾಂಕ: 30 ಜನವರಿ 2026
* ಆನ್ಲೈನ್ ಅರ್ಜಿ ಆರಂಭ: 31 ಜನವರಿ 2026
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14 ಫೆಬ್ರವರಿ 2026
* ಶುಲ್ಕ ಪಾವತಿಗೆ ಕೊನೆಯ ದಿನಾಂಕ: 16 ಫೆಬ್ರವರಿ 2026
* ತಿದ್ದುಪಡಿ ದಿನಾಂಕ: 18 - 19 ಫೆಬ್ರವರಿ 2026
* ಮೆರಿಟ್ ಪಟ್ಟಿ: ಶೀಘ್ರವೇ ಅಪ್ಡೇಟ್ ಮಾಡಲಾಗುವುದು.
* ವಿವರಗಳಿಗೆ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್ ಜಿಡಿಎಸ್ ಅಧಿಕೃತ ವೆಬ್ತಾಣವನ್ನು ಪರೀಕ್ಷಿಸಿ ದೃಢಪಡಿಸಬಹುದು.
► ಅರ್ಜಿ ಶುಲ್ಕ
ಜನರಲ್/ಒಬಿಸಿ:100 ರೂ. ಎಸ್ಸಿ/ಎಸ್ಟಿ/ ಪಿಡಬ್ಲ್ಯುಡಿ/ಮಹಿಳೆಯರು: 0 ರೂ.
ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್/ ಮೊಬೈಲ್ ವಾಲೆಟ್ ಮೂಲಕ ಪಾವತಿಸುವ ಅವಕಾಶವಿದೆ.
► ವಯೋಮಿತಿ
* ಕನಿಷ್ಠ ವಯಸ್ಸು- 18 ವರ್ಷಗಳು
* ಗರಿಷ್ಠ ವಯಸ್ಸು 40 ವರ್ಷಗಳು
2026 ಜನವರಿ 1ಕ್ಕೆ ಅನ್ವಯಿಸುವಂತೆ ವಯೋಮಿತಿ ನಿರ್ಧರಿಸಲಾಗುವುದು. ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ಗ್ರಾಮೀಣ್ ಡಾಕ್ ಸೇವಕ್ ಜಿಡಿಎಸ್ 2026 ನೇಮಕಾತಿ ನಿಯಮಗಳಿಗೆ ತಕ್ಕಂತೆ ನೀಡಲಾಗುವುದು.
► ಒಟ್ಟು ಹುದ್ದೆಗಳು
ಸುಮಾರು 28000+ ಹುದ್ದೆಗಳು
► ಹುದ್ದೆಯ ಹೆಸರು
ಗ್ರಾಮೀಣ್ ಡಾಕ್ ಸೇವಕ್ ಜಿಡಿಎಸ್ 2026
ಬ್ರಾಂಚ್ ಪೋಸ್ಟ್ಮಾಸ್ಟರ್ (ಬಿಪಿಎಂ), ಅಸಿಸ್ಟಂಟ್ ಬ್ರಾಂಚ್ ಪೋಸ್ಟ್ಮಾಸ್ಟರ್ (ಎಬಿಪಿಎಂ), ಡಾಕ್ ಸೇವಕ್
► ವಿದ್ಯಾರ್ಹತೆ
ಅಭ್ಯರ್ಥಿಗಳು 10ನೇ ತರತಿಯನ್ನು ಗಣಿತ, ಇಂಗ್ಲಿಷ್ ಭಾಷೆಯ ಜೊತೆಗೆ ಸ್ಥಳೀಯ ಭಾಷೆಯಲ್ಲಿ ಪಾಸಾಗಿರಬೇಕು. ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
► ಆಯ್ಕೆ ಪ್ರಕ್ರಿಯೆ
ಮೆರಿಟ್ ಪಟ್ಟಿಯ ಆಧಾರದಲ್ಲಿ ಆಯ್ಕೆ
ದಾಖಲೆ ಪರಿಶೀಲನೆ
ಅಂತಿಮ ಆಯ್ಕೆ