×
Ad

ಮಾರ್ಚ್ ತಿಂಗಳಲ್ಲಿ 10 ದಿನ ಬ್ಯಾಂಕ್ ರಜೆ

Update: 2026-03-04 18:20 IST

Photo : PTI

ಮಾರ್ಚ್ ಆರ್ಥಿಕ ವರ್ಷಾಂತ್ಯದ ತಿಂಗಳಾಗಿರುವುದರಿಂದ ಹಣಕಾಸಿನ ಲೆಕ್ಕಾಚಾರ, ತೆರಿಗೆ ಪಾವತಿ ಸೇರಿದಂತೆ ತುರ್ತು ಕೆಲಸಗಳು ಇರುತ್ತವೆ. ಹೀಗಾಗಿ ರಜಾ ದಿನಗಳ ಬಗ್ಗೆ ತಿಳಿದಿರುವುದು ಮುಖ್ಯ.

ದೈನಂದಿನ ಹಣಕಾಸು ವಹಿವಾಟಿಗೆ ಬ್ಯಾಂಕ್ ಗಳನ್ನು ಅವಲಂಬಿಸಿರುವ ಗ್ರಾಹಕರು, ರೈತರು ಹಾಗೂ ಉದ್ಯಮಿಗಳು ಗಮನಿಸಬೇಕಾಗಿರುವುದೇನೆಂದರೆ ಈ ತಿಂಗಳಲ್ಲಿ ಸಾಲು ಸಾಲು ಬ್ಯಾಂಕ್ ರಜಾಗಳಿವೆ. ರಜಾ ದಿನಗಳನ್ನು ಗಮನಿಸಿ ಬ್ಯಾಂಕ್ ಕೆಲಸಗಳನ್ನು ಯೋಜಿಸಿಕೊಳ್ಳುವುದು ಉತ್ತಮ. ಏಕೆಂದರೆ ಈ ಬಾರಿ ರವಿವಾರ ಮತ್ತು ಶನಿವಾರದ ಸಾಮಾನ್ಯ ರಜೆಗಳ ಜೊತೆಗೆ ಯುಗಾದಿ, ಈದ್ ಸೇರಿದಂತೆ ಪ್ರಮುಖ ಹಬ್ಬಗಳ ರಜೆಗಳಿವೆ.

ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇತರ ಬ್ಯಾಂಕ್ ಗಳು ಬಿಡುಗಡೆ ಮಾಡಿರುವ 2026ರ ಅಧಿಕೃತ ರಜಾ ಪಟ್ಟಿ ಮತ್ತು ರಾಜ್ಯ ಸರ್ಕಾರದ ಅಧಿಕೃತ ಕ್ಯಾಲೆಂಡರ್ ಪ್ರಕಾರ ಮಾರ್ಚ್ ತಿಂಗಳಲ್ಲಿ ಕರ್ನಾಟಕದಲ್ಲಿ ಒಟ್ಟು 10 ದಿನಗಳ ಕಾಲ ಬ್ಯಾಂಕ್ ಗಳು ಕಾರ್ಯ ನಿರ್ವಹಿಸುವುದಿಲ್ಲ. ಮಾರ್ಚ್ ಆರ್ಥಿಕ ವರ್ಷಾಂತ್ಯದ ತಿಂಗಳಾಗಿರುವುದರಿಂದ ಹಣಕಾಸಿನ ಲೆಕ್ಕಾಚಾರ, ತೆರಿಗೆ ಪಾವತಿ ಸೇರಿದಂತೆ ತುರ್ತು ಕೆಲಸಗಳು ಇರುತ್ತವೆ. ಹೀಗಾಗಿ ರಜಾ ದಿನಗಳ ಬಗ್ಗೆ ತಿಳಿದಿರುವುದು ಮುಖ್ಯ.

ರಜಾದಿನಗಳು ಹೀಗಿವೆ:

ಮಾರ್ಚ್ 1 ರವಿವಾರ (ವಾರದ ರಜೆ)

ಮಾರ್ಚ್ 8 ರವಿವಾರ (ವಾರದ ರಜೆ)

ಮಾರ್ಚ್ 14 ಎರಡನೇ ಶನಿವಾರ (ಬ್ಯಾಂಕ್ ರಜೆ)

ಮಾರ್ಚ್ 15 ರವಿವಾರ (ವಾರದ ರಜೆ)

ಮಾರ್ಚ್ 19 ಯುಗಾದಿ ಹಬ್ಬದ ರಜೆ

ಮಾರ್ಚ್ 21 ಈದ್ ಉಲ್ ಫಿತ್ರ್ ರಜೆ

ಮಾರ್ಚ್ 22 ರವಿವಾರ (ವಾರದ ರಜೆ)

ಮಾರ್ಚ್ 28 ನಾಲ್ಕನೇ ಶನಿವಾರ (ಬ್ಯಾಂಕ್ ರಜೆ)

ಮಾರ್ಚ್ 29 ರವಿವಾರ (ವಾರದ ರಜೆ)

ಮಾರ್ಚ್ 31 ಮಹಾವೀರ ಜಯಂತಿ ರಜೆ

ಎಪ್ರಿಲ್ ತಿಂಗಳಲ್ಲೂ ಗುಡ್ಫ್ರೈಡ್ (ಎಪ್ರಿಲ್ 03), ಬಿಆರ್ ಅಂಬೇಡ್ಕರ್ ಜಯಂತಿ (ಎಪ್ರಿಲ್ 14) ಹಾಗೂ ಬಸವ ಜಯಂತಿ (ಎಪ್ರಿಲ್ 20) ಪ್ರಯಕ್ತ ಬ್ಯಾಂಕ್ಗಳಿಗೆ ರಜೆ ಇರಲಿವೆ. ಜೊತೆಗೆ ಆರ್ಥಿಕ ವರ್ಷದ ಆರಂಭದ ದಿನವಾದ ಎಪ್ರಿಲ್ 1ರಂದು ವಾರ್ಷಿಕ ಲೆಕ್ಕಾಚಾರದ ಕಾರಣಕ್ಕೆ ಗ್ರಾಹಕರಿಗೆ ಬ್ಯಾಂಕ್ ಸೇವೆ ಇರುವುದಿಲ್ಲ.

ಬ್ಯಾಂಕ್ಗಳಿಗೆ ರಜೆಗಳಿದ್ದರೂ ಬ್ಯಾಂಕ್ ಶಾಖೆಗಳು ಮಾತ್ರ ಮುಚ್ಚಿರುತ್ತವೆಯೇ ವಿನಾ ಡಿಜಿಟಲ್ ಸೇವೆಗಳಲ್ಲ. ಎಟಿಎಂ, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ಯುಪಿಐ ಸೇವೆಗಳು ಎಂದಿನಂತೆ 24X7 ಕಾರ್ಯನಿರ್ವಹಿಸಲಿವೆ. ತುರ್ತು ಹಣ ವರ್ಗಾವಣೆಗೆ ಡಿಜಿಟಲ್ ವೇದಿಕೆಗಳನ್ನು ಬಳಸಿಕೊಳ್ಳಬಹುದು.

ಆದರೆ ಡಿಡಿ, ಚೆಕ್ ಕ್ಲಿಯರೆನ್ಸ್, ಸಾಲದ ಪ್ರಕ್ರಿಯೆ ಮತ್ತು ಕೆವೈಸಿ ಅಪ್ಡೇಟ್ನಂತಹ ಕೆಲಸಗಳಿದ್ದರೆ ರಜಾ ದಿನಗಳನ್ನು ಹೊರತುಪಡಿಸಿ ಬ್ಯಾಂಕ್ಗೆ ಭೇಟಿ ನೀಡಬೇಕಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News