ರಾಜ್ಯದ ವಿವಿಧ ಕ್ರೀಡಾ ವಸತಿ ನಿಲಯಗಳಿಗೆ ತಾತ್ಕಾಲಿಕ ತರಬೇತುದಾರರ ನೇಮಕಾತಿಗೆ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ | Photo Credit : gemini AI
ಈ ನೇಮಕಾತಿಯು ಸಂಪೂರ್ಣವಾಗಿ ಗುತ್ತಿಗೆ ಆಧಾರಿತ ಮತ್ತು ತಾತ್ಕಾಲಿಕ ಸೇವೆಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಆದೇಶ ಪಡೆದ ದಿನಾಂಕದಿಂದ 30-11-2026ರವರೆಗೆ ಮಾತ್ರ ಸೇವೆ ಸಲ್ಲಿಸಲು ಅವಕಾಶವಿರುತ್ತದೆ.
ರಾಜ್ಯದ ವಿವಿಧ ಕ್ರೀಡಾ ವಸತಿ ನಿಲಯಗಳಲ್ಲಿ ಖಾಲಿ ಇರುವ ‘ತರಬೇತುದಾರರ’ ಹುದ್ದೆಗಳನ್ನು ಭರ್ತಿ ಮಾಡಲು ಇಲಾಖೆಯು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗುತ್ತಿಗೆ ಆಧಾರದ ಮೇಲೆ ಮಾಸಿಕ ಸಂಚಿತ ವೇತನದಡಿ ನೇಮಕಾತಿ ನಡೆಯಲಿದ್ದು, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತದ ಅರ್ಹ ನಾಗರಿಕರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತರು ಅಧಿಕೃತ ಸೂಚನೆ ಮತ್ತು ಅರ್ಜಿ ಫಾರಂ ಅನ್ನು ಈ ಮುಂದಿನ ಲಿಂಕ್ನಲ್ಲಿ ಪಡೆಯಬಹುದು: https://dyes.karnataka.gov.in/kn
📌 ಹುದ್ದೆಗಳ ವಿವರ:
ಒಟ್ಟು 6 ಕ್ರೀಡಾ ವಿಭಾಗಗಳಿಗೆ ತರಬೇತುದಾರರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಅದರ ಸಂಪೂರ್ಣ ವಿವರ ಹೀಗಿದೆ:
ಅಥ್ಲೆಟಿಕ್ಸ್: ಹಾವೇರಿ/ಬೀದರ್/ ರಾಮನಗರ ಕ್ರೀಡಾ ವಸತಿ ನಿಲಯ – 1 ಹುದ್ದೆ
ಹಾಕಿ: ಕೊಡಗು/ರಾಯಚೂರು/ ಬಾಗಲಕೋಟೆ ಕ್ರೀಡಾ ವಸತಿ ನಿಲಯ - 1 ಹುದ್ದೆ
ಜಿಮ್ನಾಸ್ಟಿಕ್ಸ್- ಮೈಸೂರು ಕ್ರೀಡಾ ವಸತಿ ನಿಲಯ - 1 ಹುದ್ದೆ
ಸೈಕ್ಲಿಂಗ್: ಬೆಳಗಾವಿ ಕ್ರೀಡಾ ವಸತಿ ನಿಲಯ- 1 ಹುದ್ದೆ
ಕುಸ್ತಿ: ಗದಗ ಕ್ರೀಡಾ ವಸತಿ ನಿಲಯ - 1 ಹುದ್ದೆ
ಫುಟ್ಬಾಲ್: ರಾಯಚೂರು ಕ್ರೀಡಾ ವಸತಿ ನಿಲಯ - 1 ಹುದ್ದೆ
📌 ಉದ್ಯೋಗ ಹೇಗಿರಲಿದೆ?
ಈ ನೇಮಕಾತಿಯು ಖಾಯಂ ಹುದ್ದೆಯಲ್ಲ. ಸಂಪೂರ್ಣವಾಗಿ ಗುತ್ತಿಗೆ ಆಧಾರಿತ ಮತ್ತು ತಾತ್ಕಾಲಿಕ ಸೇವೆಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಆದೇಶ ಪಡೆದ ದಿನಾಂಕದಿಂದ 30-11-2026ರವರೆಗೆ ಮಾತ್ರ ಸೇವೆ ಸಲ್ಲಿಸಲು ಅವಕಾಶವಿರುತ್ತದೆ.
📌 ಅರ್ಜಿ ಸಲ್ಲಿಕೆ ಎಲ್ಲಿ ಮತ್ತು ಹೇಗೆ?
ಕೊನೆಯ ದಿನಾಂಕ: ಅರ್ಜಿ ಮತ್ತು ಅಗತ್ಯ ಕ್ರೀಡಾ/ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸಲು 2026 ಮಾರ್ಚ್ 16ರ ಸಂಜೆ 4 ಗಂಟೆ ಅಂತಿಮ ಗಡುವಾಗಿರುತ್ತದೆ. ಆಸಕ್ತಿ ಅಭ್ಯರ್ಥಿಗಳು ತಮ್ಮ ಭರ್ತಿ ಮಾಡಿದ ಅರ್ಜಿಗಳನ್ನು ಮತ್ತು ಪೂರಕ ದಾಖಲೆಗಳನ್ನು “ಮಹಾ ನಿರ್ದೇಶಕರು, ಕರ್ನಾಟಕ ಕ್ರೀಡಾ ಪ್ರಾಧಿಕಾರ, ರಾಜ್ಯ ಯುವ ಕೇಂದ್ರ, ನೃಪತುಂಗ ರಸ್ತೆ, ಬೆಂಗಳೂರು- 560001 ಇವರಿಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಸಲ್ಲಿಸಬೇಕು.
ಅರ್ಜಿ ಫಾರಂ ಇಲಾಖೆಯ ಅಧಿಕೃತ ವೆಬ್ಸೈಟ್ https://dyes.karnataka.gov.in/kn ನಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ಕಚೇರಿಯನ್ನು ಖುದ್ದಾಗಿ ಸಂಪರ್ಕಿಸಬಹುದು.