ಹರ್ಯಾಣ: ಮಾರ್ಚ್ 31ರ ವರೆಗೆ ವಿ.ವಿ., ಕಾಲೇಜುಗಳಿಗೆ ರಜೆ

Update: 2020-03-13 19:21 GMT

ಚಂಡಿಗಢ, ಮಾ. 13: ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳಿಗೆ ಹರ್ಯಾಣ ಸರಕಾರ ಮಾರ್ಚ್ 31ರ ವರೆಗೆ ರಜೆ ಘೋಷಿಸಿದೆ.

ಗುರುಗ್ರಾಮ, ಸೋನೆಪತ್, ರೋಹ್ಟಕ್, ಝಝ್ಝಾರ್, ಫರಿದಾಬಾದ್-ಈ 5 ಜಿಲ್ಲೆಗಳ ಶಾಲೆಗಳನ್ನು ಮಾರ್ಚ್ 31ರ ವರೆಗೆ ಮುಚ್ಚಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ, ಈ ಜಿಲ್ಲೆಗಳ ಶಾಲಾ ವಿದ್ಯಾರ್ಥಿಗಳು ಶಾಲೆಯ ಶಿಕ್ಷಣ ಇಲಾಖೆ ಆದೇಶಿಸಿದ ವೇಳಾಪಟ್ಟಿಯಂತೆ ಪರೀಕ್ಷೆ ಬರೆಯಲಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಹರ್ಯಾಣ ರಾಜ್ಯದಲ್ಲಿರುವ ಎಲ್ಲ ವಿಶ್ವವಿದ್ಯಾನಿಲಯ ಹಾಗೂ ಕಾಲೇಜುಗಳನ್ನು ಮಾರ್ಚ್ 31ರ ವರೆಗೆ ಮುಚ್ಚಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಪಂಚಕುಲ ಮೂಲದ ಉನ್ನತ ಶಿಕ್ಷಣದ ಪ್ರಧಾನ ನಿರ್ದೇಶಕರು ತಿಳಿಸಿದ್ದಾರೆ.

ಈ ನಡುವೆ ಹರ್ಯಾಣ ಶಾಲಾ ಶಿಕ್ಷಣ ಇಲಾಖೆ ತನ್ನ ಆದೇಶದಲ್ಲಿ, ‘‘ಸೋನೆಪತ್, ರೋಹ್ಟಕ್, ಝಝ್ಝರ್, ಫರೀದಾಬಾದ್ ಹಾಗೂ ಗುರ್ಗಾಂವ್ ಜಿಲ್ಲೆಗಳಲ್ಲಿರುವ ಸರಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಮಾರ್ಚ್ 31ರ ವರೆಗೆ ರಜೆ ಘೋಷಿಸಲಾಗಿದೆ. ಆದರೆ, ಪರೀಕ್ಷೆಗಳು ವೇಳಾಪಟ್ಟಿಯಂತ ನಡೆಯಲಿದೆ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News