ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೊರೋನ ಶಂಕಿತ ಪ್ರಯಾಣಿಕರ ಆಗಮನ
Update: 2020-03-14 22:44 IST
ಬೆಂಗಳೂರು, ಮಾ.14: ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕಿತ ಕೊರೋನ ವೈರಸ್ ಪ್ರಯಾಣಿಕರು ಆಗಮಿಸಿದ್ದು, ಚಿಕಿತ್ಸೆಗಾಗಿ ಅವರನ್ನು ದೇವನಹಳ್ಳಿಯ ಆಕಾಶ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಶುಕ್ರವಾರ ತಡರಾತ್ರಿ ಫ್ರಾನ್ಸ್‌ನಿಂದ 13, ದುಬೈನಿಂದ 7 ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಪರೀಕ್ಷೆ ನಡೆಸಿದಾಗ ಕೊರೋನ ವೈರಸ್ ಇರುವ ಸಂಶಯ ವ್ಯಕ್ತವಾಗಿದೆ.
ತಕ್ಷಣವೇ ಅವರಿಗೆ ದೇವನಹಳ್ಳಿ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಹೊಸಕೋಟೆ ಹೊರವಲಯದ ಎಂವಿಜೆ ಆಸ್ಪತ್ರೆಯಲ್ಲೂ ಚಿಕಿತ್ಸೆಗೆ ಸಿದ್ಧತೆ ಮಾಡಲಾಗಿದೆ. ಆರೋಗ್ಯ ಇಲಾಖೆ, ಜಿಲ್ಲಾಡಳಿತದಿಂದ ಪರಿಶೀಲನೆ ನಡೆಸಲಾಗಿದೆ.