ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆ ವಾರ್ಷಿಕ ಮಹಾ: ನೂತನ ಸಮಿತಿ ಅಸ್ತಿತ್ವಕ್ಕೆ
ಬೆಂಗಳೂರು, ಮಾ.16: ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲೆ ಇದರ ವಾರ್ಷಿಕ ಮಹಾಸಭೆಯು ದಿನಾಂಕ ಮಾ.14 ರಂದು ಬೆಳಗ್ಗೆ ಹಲಸೂರ್ ಮರ್ಕಿನ್ಸ್ ಆಡಿಟೋರಿಯಂ ನಲ್ಲಿ ಹಬೀಬ್ ನೂರಾನಿ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯನ್ನು ಎಸ್ಸೆಸ್ಸೆಫ್ ರಾಜ್ಯ ಕೋಶಾಧಿಕಾರಿ ರವೂಫ್ ಖಾನ್ ಉಡುಪಿ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಜಿಲ್ಲಾ ಕಾರ್ಯದರ್ಶಿ ಶಂಸುದ್ದೀನ್ ಅಝ್ಹರಿ ವಾರ್ಷಿಕ ವರದಿಯನ್ನು ವಾಚಿಸಿ, ಜಿಲ್ಲಾ ಕೋಶಾಧಿಕಾರಿ ಅಬುಸನಾ ಶಾಫಿ ಸಹದಿ ಪೊಯ್ಯತ್ತಬೈಲ್ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದರು.
ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಅಖ್ತರ್ ಹುಸೇನ್ ಕ್ಯಾಂಪಸ್ ವರದಿಯನ್ನು ವಾಚಿಸಿದರು. ಜಿಲ್ಲಾಧ್ಯಕ್ಷ ಹಬೀಬ್ ನೂರಾನಿ ಅಧ್ಯಕ್ಷೀಯ ಭಾಷಣ ಮಾಡಿದರು.
ಬಳಿಕ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಹಬೀಬ್ ನೂರಾನಿ, ಪ್ರಧಾನ ಕಾರ್ಯದರ್ಶಿಯಾಗಿ ಶಿಹಾಬ್ ಮಡಿವಾಳ, ಕೋಶಾಧಿಕಾರಿಯಾಗಿ ಶಾಫಿ ಸಹದಿ ಪೊಯ್ಯತ್ತಬೈಲ್ ನೇಮಕಗೊಂಡರು.
ಉಪಾದ್ಯಕ್ಷರಾಗಿ ಶಂಸುದ್ದೀನ್ ಅಝ್ಹರಿ, ಅಬೂಬಕರ್ ಅಹ್ಸನಿ, ಸ್ವಾದಿಕ್ ಸಖಾಫಿ, ಹಕೀಮ್ ಕಾರ್ಯದರ್ಶಿಗಳಾಗಿ ಶಬೀಬ್, ಫಾರೂಕ್ ಅಮಾನಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಶಿಹಾಬ್ ಮಡಿವಾಳ ಸ್ವಾಗತಿಸಿ, ಫಾರೂಕ್ ಅಮಾನಿ ಧನ್ಯವಾದ ಅರ್ಪಿಸಿದರು.