ಸಿಎಎ ವಿರೋಧಿ ದಾವೆಗಳಿಗೆ ಪ್ರತ್ಯುತ್ತರವಾಗಿ ಕೇಂದ್ರ ಸರ್ಕಾರ ಮುಂದಿಟ್ಟಿರುವ ಭಂಡ, ವಿತಂಡ ಹಾಗೂ ದುಷ್ಟ ಪ್ರತಿವಾದಗಳು

Update: 2020-03-20 06:42 GMT
ಸಾಂದರ್ಭಿಕ ಚಿತ್ರ

ಕೇಂದ್ರ ಸರ್ಕಾರ ಜಾರಿಗೆ ತಂದ  CAA  ಕಾಯ್ದೆಯ ವಿರುದ್ಧ ದಾಖಲಾಗಿರುವ 150ಕ್ಕೂ ಹೆಚ್ಚು ದಾವೆಗಳ ವಿರುದ್ಧ ಮೊನ್ನೆ ಕೇಂದ್ರ ಸರ್ಕಾರವು 129 ಪುಟಗಳ  ಪ್ರತ್ಯುತ್ತರವನ್ನು ನೀಡಿದೆ.

 CAA  ಅನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ಸರ್ಕಾರ ಆ ಪ್ರತಿವಾದದಲ್ಲಿ ಮುಂದಿಟ್ಟಿರುವ  ದುರಭಿಮಾನಿ, ಭಂಡ ಹಾಗು ದುಷ್ಟ ಪ್ರತಿವಾದಗಳ ಕೆಲವು ಸ್ಯಾಂಪಲ್ ಗಳು ಕೆಳಗಿವೆ:

ಸಾಧ್ಯವಾದಲ್ಲಿ ಸ್ವಲ್ಪ ಸಮಯ ಕೊಟ್ಟು ಇದನ್ನು ಕೂಲಂಕಷವಾಗಿ ಓದಿದರೆ ಜನರಿಗೆ ಈ ಕಾಯ್ದೆಗಳ ಹಿಂದಿನ ಮಸಲತ್ತನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮನವರಿಕೆ ಮಾಡಿಕೊಡಬಹುದು ಎಂಬುದು ನನ್ನ ಅನಿಸಿಕೆ.

- ಮೊದಲನೆಯದಾಗಿ  ಕೋರ್ಟು ತಮಗೆ ಈವರೆಗೆ ಎಲ್ಲಾ ದಾವೆಗಳ ಪ್ರತಿಗಳನ್ನು ಕಳಿಸಿಕೊಟ್ಟಿಲ್ಲವಾದ್ದರಿಂದ ಇದು ತಮೆಗೆ  ತಲುಪಿಸಲಾಗಿರುವ ದಾವೆಗಳ ಬಗೆಗಿನ  ಪ್ರಾಥಮಿಕ ಉತ್ತರವಾಗಿದ್ದು, ಬರುವ ದಿನಗಳಲ್ಲಿ ಇನ್ನು ವಿವರವಾಗಿ ಉತ್ತರಿಸಲಾಗುವುದೆಂದು ಕೇವಿಯಟ್ ಹಾಕಿಕೊಳ್ಳಲಾಗಿದೆ.

- ನಂತರದಲ್ಲಿ CAA ಕಾಯ್ದೆಯನ್ನು ಜಾರಿಗೆ ತರಬೇಕಾಗಿದ್ದ ಐತಿಹಾಸಿಕ ಸಂದರ್ಭ ಹಾಗು ಅದರ ಸಂಬಂಧ ವಿವಿಧ ಕಾನೂನು ಮತ್ತು ನಿಯಮಾವಳಿಗಳು ಜಾರಿಯಾದ ಐತಿಹಾಸಿಕ ಅನುಕ್ರಮಣಿಕೆಯನ್ನು ಕೊಡಲಾಗಿದೆ. ಅದರಲ್ಲಿ ಅತಿ ಮುಖ್ಯವಾಗಿ ಹೇಗೆ ಈ ಹಿಂದಿನಿಂದಲೂ (ಅಂದರೆ ಮುಖ್ಯವಾಗಿ ಕಾಂಗ್ರೆಸ್ ಆಳ್ವಿಕೆಯ ಸಂದರ್ಭದಲ್ಲೂ )ಪಾಕಿಸ್ತಾನ ಹಾಗು ಬಾಂಗ್ಲಾ ದೇಶದ ಧಾರ್ಮಿಕ ಅಲ್ಪಸಂಖ್ಯಾತ ವಲಸಿಗರನ್ನು (ಅಂದರೆ ಹಿಂದೂ ಮತ್ತು ಸಿಖ್ಖರನ್ನು )ಇತರರಿಗಿಂತ ವಿಶೇಷವಾದ ವರ್ಗವಾಗಿ ಪರಿಗಣಿಸುತ್ತಾ ಬರಲಾಗಿತ್ತು ಎಂಬುದನ್ನು ಸಾಬೀತು ಮಾಡುವ ಪ್ರಯತ್ನ ಮಾಡಿದ್ದಾರೆ.

-  CAA ಕಾಯ್ದೆಯು ದೇಶದ ಸಾರ್ವಭೌಮತೆ ಮತ್ತು ವಿದೇಶಾಂಗ ಸಂಬಂಧಗಳ ಕುರಿತಾದ್ದರಿಂದ ಅದರ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಪರಮಾಧಿಕಾರ ದೇಶದ ಸಂಸತ್ತಿಗಿದೆ ಮಾತ್ರ ಇದೆಯೆಂದೂ ಮತ್ತು  ಅದರ ಬಗ್ಗೆ ನ್ಯಾಯಿಕ ಮೇಲುಸ್ತುವಾರಿ ಮಾಡುವ ಅಧಿಕಾರ ಈ ದೇಶದ ನ್ಯಾಯಾಲಯಗಳಿಗಿಲ್ಲವೆಂಬುದು  ಕೇಂದ್ರ ಸರ್ಕಾರದ ಮತ್ತೊಂದು ವಿತಂಡ ವಾದ .

- ಹಾಗೆಯೆ, CAA ಕಾಯ್ದೆಯು ದೇಶದ ಸಾರ್ವಭೌಮತೆ ಮತ್ತು ವಿದೇಶಾಂಗ ಸಂಬಂಧಗಳ ಕುರಿತಾದ್ದರಿಂದ ಅದನ್ನು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯಡಿಯಲ್ಲಿ ಯಾರು ಪ್ರಶ್ನಿಸಲಾಗದು ಎಂಬುದು ಅವರ ಮತ್ತೊಂದು ಭಂಡ ವಾದ.

ಈ ಪ್ರಾಥಮಿಕ ನಿಲುವುಗಳ ನಂತರದಲ್ಲಿ  CAA ಕಾಯ್ದೆಯ ವಿರುದ್ಧ ದಾಖಲಾಗಿರುವ ಎಲ್ಲಾ ದಾವೆಗಳ ಸಾರವನ್ನು 12 ಪ್ರಮುಖ ಆಕ್ಷೇಪಗಳನ್ನಾಗಿ ವಿಂಗಡಿಸಿ ವಿವರವಾದ ಆದರೆ ಭಂಡ-ವಿತಂಡ  ಪ್ರತ್ಯುತ್ತರಗಳನ್ನು ನೀಡಲಾಗಿದೆ.

ದೀರ್ಘವಾಗಿರುವ ಆ ವಾದಗಳ ಸಾರವನ್ನು ಪ್ರತಿಫಲಿಸುವ ಪ್ಯಾರಾಗಳನ್ನು ಯಥಾವತ್ ಕೊಟ್ಟಿದ್ದೇನೆ. ಆ ಸಾರದ ಸಾರವನ್ನು ಮಾತ್ರ ಪ್ರತಿ ಪ್ಯಾರಗಳ ಕನ್ನಡ ಶೀರ್ಷಿಕೆಯಲ್ಲಿ ಕೊಡುವ ಪ್ರಯತ್ನ ಮಾಡಿದ್ದೇನೆ.

1.  ಬಾಂಗ್ಲಾದೇಶ-ಪಾಕಿಸ್ತಾನ- ಅಫ್ಘಾನಿಸ್ತಾನಗಳ ಧಾರ್ಮಿಕ ಅಲ್ಪಸಂಖ್ಯಾತರ ಸಹಜ ಹಿಂದಿರುಗುದಾಣ ಭಾರತವೇ (ಅರ್ಥಾತ್ ಭಾರತವು ಹಿಂದುಗಳ ಸಹಜ ಮಾತೃಭೂಮಿ ) ಎಂಬುದರ ಕುರಿತು:

(Para-21)

what the competent legislature has done by the present amendment, is merely recognition of a historic fact and ensuring that the communities which are in numerical and religious minorities in the three countries and whose natural place of return would be India in case of a displacement are granted citizenship which is a sovereign function to be exercised by the competent legislature.  

2. ಆ ಮೂರೂ ದೇಶಗಳಲ್ಲಿ  CAA ಕಾಯ್ದೆ ಗುರುತಿಸದ ಇನ್ನಿತರ ಸಮುದಾಯಗಳೂ ದೌರ್ಜನ್ಯಕ್ಕೆ ಗುರಿಯಾಗುತ್ತಿದ್ದರೂ ಅವುಗಳನ್ನು  CAA  ಅಡಿ ಒಳಗೊಳ್ಳದ ಬಗ್ಗೆ -  ಆ ಮೂರೂ ದೇಶಗಳಲ್ಲಿ ಯಾವ ಸಮುದಾಯಗಳು ಧಾರ್ಮಿಕ ತಾರತಮ್ಯಕ್ಕೆ ಗುರಿಯಾಗಿದ್ದಾರೆ ಎಂಬ ತೀರ್ಮಾನವನ್ನು ನಮ್ಮ ಸಂಸತ್ತು ಮಾಡುತ್ತದೆ.  ಅದನ್ನು ತೀರ್ಮಾನಿಸಲು ಆ ಮೂರೂ ದೇಶಗಳ ಸರ್ಕಾರದ ನಡತೆಯನ್ನು  ನಾವು ಆಧರಿಸಬೇಕಿಲ್ಲ.   (ಅರ್ಥಾತ್ ಪಾಕಿಸ್ತಾನದಲ್ಲಿ  ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾಗಿರುವ ಅಲ್ಪಸಂಖ್ಯಾತರಾದ  ಅಹ್ಮದೀಯರು ಮತ್ತು ಅಫ್ಘಾಅನಿಸ್ತಾನದ ಹಜಾರಗಳನ್ನು ಗುರುತಿಸಬೇಕಿಲ್ಲ):

  (Para - 22) 

 The Indian Parliament, which doubtlessly has the legislative competence, is not required to take into consideration as to which other communities are treated as minorities in the said three named countries.  The definition of the religious minorities for the purpose of the present Act contained in the legislation made by the Indian Parliament cannot be dependent upon the discretion of the respective Legislature and Governments of the said three named countries so far as the minority status in their countries are concerned.

3. ಬಾಂಗ್ಲಾದೇಶ-ಪಾಕಿಸ್ತಾನ- ಅಫ್ಘಾನಿಸ್ತಾನಗಳು ಮಾತ್ರ ಏಕೆ? - ಏಕೆಂದರೆ ಅವು  ಭಾರತದ ನೆರೆಹೊರೆ ದೇಶಗಳಾಗಿವೆ  ಮತ್ತು ಯಾವ ದೇಶಗಳನ್ನು ಸೇರಿಸಿಕೊಳ್ಳುತೇವೆ ಮತ್ತು ಯಾವುದನ್ನು ಬಿಡುತ್ತೇವೆ ಎಂಬುದು ನಮ್ಮ ಸರ್ಕಾರದ  ಶಾಸನಾತ್ಮಕ ವಿವೇಕಕ್ಕೆ  ಬಿಟ್ಟಿದ್ದು !!

  (Para-28) 

 the second tier of classification is the identification of the People's Republic of Bangladesh, the Islamic Republic of Afghanistan and the Islamic Republic of Pakistan within the Indian subcontinent. It is submitted that these countries are a class in themselves, which is centered on a recognition of countries with a specific state religion within the neighbourhood of India........It is further submitted that inclusion of one particular country in the list and non-inclusion of other(s) cannot be subject-matter of judicial review. It is humbly submitted that the same is in the domain of legislative decision making and the legislative wisdom. It is submitted that if such an exercise is treated to be a part of judicial review, it will not only be an unending process but it will render all legislative classifications ultra vires.

4. ಕೆಲವು ದೇಶಗಳನ್ನು ಮಾತ್ರ ಸೇರಿಸಿಕೊಂಡು ಕೆಲವನ್ನು ಬಿಟ್ಟಿರುವ ತಾರತಮ್ಯವೇಕೆ ಎಂಬ ಬಗ್ಗೆ-  ಭಾರತದಂಥ ಸಂಕೀರ್ಣ ಸಂದರ್ಭದಲ್ಲಿ ಶಾಸನ ಮಾಡುವಾಗ ಒಂದಷ್ಟು ತಾರತಮ್ಯ ಆಗಿಯೇ ಆಗುತ್ತದೆ. ಅಷ್ಟು ಅವಕಾಶ ಸಂಸತ್ತಿಗಿದ್ದೆ ಇದೆ!!:

   (Para-36) 

It is further respectfully submitted that in the application of the arbitrariness and non-discrimination principles, in view of the inherent complexity in dealing with wide mosaic of society, immigration, foreigners and citizenship, foreign policy, national security, cultures and religions, it is not conceivable to perfectly tailor a legislation and therefore larger discretion to the Legislature ought to be permitted in such matters of classification.

5. ಚೀನಾ, ಮಯನ್ಮಾರ್ ಮತ್ತು ಶ್ರೀಲಂಕಾಗಳಲ್ಲಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾದವರನ್ನು ಏಕೆ ಸೇರಿಸಿಕೊಂಡಿಲ್ಲವೆಂಬ ಬಗ್ಗೆ- ಯಾವ ದೇಶಗಳನ್ನು ಸೇರಿಸಿಕೊಳ್ಳುತ್ತೇವೆ ಎಂಬುದು ನಮ್ಮ ದೇಶದ ವಿದೇಶಾಂಗ ನೀತಿಗೆ ಸಂಬಂಧಪಟ್ಟ ವಿಚಾರ. ಹೀಗಾಗಿ ಅದನ್ನು ಪ್ರಶ್ನಿಸುವಂತಿಲ್ಲ. ಹಾಗು ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಆಗುತ್ತಿರುವ ದೌರ್ಜನ್ಯಗಳೆಲ್ಲವನ್ನು ಭಾರತದ ಸಂಸತ್ತು ಗಮನಿಸಲಾಗುವುದಿಲ್ಲ..!

  (Para- 38,39) 

the other assertion of some of the Petitioners in this regard is non-recognition of China, Myanmar and Sri lanka from the second tier of classification. The Petitioners allege that the said exclusion for the classification of particular neighbouring countries results in excluding the Rohingya community in Myanmar, the Tamil community in Sri lanka and the Buddhist community in Tibet and hence, is discriminatory and arbitrary........it is submitted that the classification of particular neighbouring countries is directly relatable to the foreign policy of the nation and cannot be questioned on the ground of under-inclusiveness..... Further, as stated above, without prejudice to the merits of the purported persecution of the communities mentioned in this paragraph, the CAA is not meant to be an omnibus solution to issues across the world and the Indian Parliament cannot be expected to take note of possible persecutions that may be taking place across various countries in the world.

6. CAA ಕಾಯ್ದೆ ಸೆಕ್ಯುಲಾರಿಸಂಗೆ ವಿರುದ್ಧ ಎಂಬ ದೂರಿನ ಕುರಿತು-  CAA ಕಾಯ್ದೆಯು ಧಾರ್ಮಿಕ ದೌರ್ಜನ್ಯವನ್ನು ಆಧರಿಸಿದೆಯೇ ಹೊರತು ಧರ್ಮವನ್ನಲ್ಲ. ಆದ್ದರಿಂದ ಇದು ಸೆಕ್ಯುಲಾರಿಸಂಗೆ ವಿರುದ್ಧವಲ್ಲ !

 (Para-44) 

It is submitted that the CAA does not classify or differentiate on the ground of religion rather it classifies on the ground of “religious persecution” in countries functioning with a state religion. The CAA therefore does not violate the cherished principle of secularism  

7. NRC ಜಾರಿಗೊಳಿಸುವುದು ಒಂದು ಸಾರ್ವಭೌಮಿ ಸರ್ಕಾರವು ಮಾಡಲೇಬೇಕಾದ ಕರ್ತವ್ಯ ಎಂಬ ಬಗ್ಗೆ !!-

  (Para- 47)

 the legal provisions regarding the National Register of Citizens i.e. Section 14A of the 1955 Act have been part of said 1955 Act since December, 2004.  It is submitted that said provisions consist merely of the procedure and the authority concerned for the preparation of a national register of citizens. It is submitted that the preparation of a national register of citizens is a necessary exercise for any sovereign country for mere identification of citizens from non-citizens

8. ವಲಸಿಗರ ಹಕ್ಕುಗಳ ಬಗ್ಗೆ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಪಾಲಿಸಬೇಕೆಂಬ ಬಗ್ಗೆ- ನಮ್ಮ ದೇಶದ ಸಂಸತ್ತು ಒಪ್ಪದ ಅಂತರಾಷ್ಟ್ರೀಯ  ಒಪ್ಪಂದಗಳಿಗೆ  ಕೋರ್ಟುಗಳು ಸಮ್ಮತಿ ಸೂಚಿಸುವಂತಿಲ್ಲ. ಹಾಗು ನಮ್ಮ ದೇಶದ ಕಾನೂನುಗಳಿಗೆ ಜನಾದೇಶವಿದ್ದಲ್ಲಿ ಅವು ಅಂತಾರಾಷ್ಟ್ರೀಯ ಕಾನೂನುಗಳಿಗೆ ವಿರುದ್ಧವಿದ್ದರೂ  ಪಾಲಿಸಬೇಕು .

  (Para -55) 

It is respectfully submitted that in essence, the domestic courts cannot say yes if Parliament has said no to a principle of international law. It is submitted that if statutory enactments are clear in meaning and mandate, they must be construed according to their meaning even though they are contrary to the comity of nations or international law

9. ಮೊದಲು ಪೌರತ್ವ ನಿಯಮಾವಳಿ 2003 ಜಾರಿಗೆ ಬಂದು ಆ ನಂತರ ಅದಕ್ಕೆ 2004 ಪೌರತ್ವ ಕಾಯ್ದೆ ತಿದ್ದುಪಡಿ ಶಾಸನಾತ್ಮಕ ಬೆಂಬಲವನ್ನು ಒದಗಿಸಿದ್ದರ ಬಗ್ಗೆ :

  (Para-61) 

It is submitted that previously, the Central Government in exercise of powers conferred by sub-sections (1) and (3) of Section 18 of The Citizenship Act, 1955 had vide Gazette Notification dated 10th December, 2003 already notified The Citizenship (Registration of Citizens and issue of National Identity Cards)  Rules, 2003.  The Citizenship (Amendment) Act, 2004 provided legislative backing to these rules framed under delegated legislation by the Central Government

10. NRC ಮತ್ತು NPR ನಿಯಮಾವಳಿಗಳು ಈ ದೇಶದ ಎಲ್ಲಾ 135 ಕೋಟಿ ಜನರಿಗೂ ಅನ್ವಯಿಸುತ್ತದೆ ಎಂಬ ಬಗ್ಗೆ :

  (Para-62) 

 It is submitted that the provisions of the Section 14 A and the 2003 rules apply to all citizens of India without any discrimination and empower the Central Government through the machinery of Registrar General of India to take further action in compliance of the legislative mandate.

11. CAA  ಕಾಯ್ದೆಯ ಫಲಾನುಭವಿಗಳಾಗಲು 2014 ರ ಡಿಸೆಂಬರ್ 31ರ ಕಾಲಮಿತಿ ಯ ಶರತ್ತಿನ ಕುರಿತು- ಒಂದು ಶಾಸನ ಜಾರಿ ಮಾಡಲು ಯಾವುದಾದರೂ ಒಂದು ದಿನಾಂಕ ನಿಗದಿ ಮಾಡಬೇಕಿರುತ್ತದೆ. ಹಾಗೆಂದ ಮಾತ್ರಕ್ಕೆ ಅದನ್ನು ಬೇಕಾಬಿಟ್ಟಿಯಾಗಿ ನಿಗದಿಯಾದದ್ದು ಎಂದು ಹೇಳಲಾಗದು...!

  (Para- 74) 

It is submitted that merely because one date is mentioned in a legislative enactment and not some other date, does not mean that the said date is arbitrary.

ಪ್ರಮುಖವಾಗಿ ಇವಿಷ್ಟು ಸರ್ಕಾರ ನೀಡಿರುವ ದುರಭಿಮಾನಿ,  ಹಾಗು ದುಷ್ಟ ಉತ್ತರಗಳು.

CAA ಒಂದು ನಿರ್ದಿಷ್ಟ ಹಾಗು ಸೀಮಿತ ಸಮಸ್ಯೆಯನ್ನು ಸೀಮಿತ ಪರಿಧಿಯಲ್ಲಿ ಬಗೆಹರಿಸಲು ತಂದಿರುವ ಸೀಮಿತ ಉದ್ದೇಶದ ಕಾಯ್ದೆ. ಅಂಥ ಕಾಯ್ದೆಗಳನ್ನು ಮಾಡುವ ಹಕ್ಕು ನಮ್ಮ ಸಾರ್ವಭೌಮಿ ಸಂಸತ್ತಿಗಿದೆ. ಅದನ್ನು ಯಾರು ಪ್ರಶ್ನಿಸಬೇಕಿಲ್ಲ ಎಂಬುದು ಅವರ ವಾದದ ಅಡಿಪಾಯ .

ಇದರ ಜೊತೆಗೆ NPR-NRC ಕಾಯ್ದೆಗಳು 2004ರಷ್ಟು ಹಿಂದೆಯೇ ಜಾರಿಯಾಗಿದೆಯೆಂದು ಹಾಗು ಅವುಗಳ ಬಗ್ಗೆ ಈ ದಾವೆಗಳಲ್ಲಿ ಪ್ರಶ್ನಿಸಲಾಗಿಲ್ಲವೆಂದು ಉತ್ತರಿಸಲಾಗಿದೆ. ಹಾಗೆಯೇ 1948ರಿಂದಲೂ ಪಾಕಿಸ್ತಾನ ಹಾಗು ಬಾಂಗ್ಲಾದೇಶಗಳ ಹಿಂದೂ ಮತ್ತು ಸಿಖ್ ಅಲ್ಪಸಂಖ್ಯಾತರನ್ನು ಧಾರ್ಮಿಕ ದೌರ್ಜನ್ಯಕ್ಕೆ ತುತ್ತಾದವರೆಂದು ಪರಿಗಣಿಸುತ್ತಾ ಇತರರಿಗಿಂತಾ ವಿಶೇಷ ಮಾನ್ಯತೆಯನ್ನು ಈ ಹಿಂದಿನ ಅರ್ಥಾತ್ ಕಾಂಗ್ರೆಸ್ ಸರ್ಕಾರಗಳು ನೀಡುತ್ತಾ ಬಂದಿದ್ದವೆಂದು ಸಾಬೀತು ಮಾಡಲು ಸಾಕಷ್ಟು ಪುರಾವೆಗಳನ್ನು ಕೊಡಲಾಗಿದೆ. ಅದರ ಭಾಗವಾಗಿಯೇ NPR-NRC ಹುಟ್ಟಿಗೆ ಕಾರಣವಾದ  2004ರ ಪೌರತ್ವ ತಿದ್ದುಪಡಿ ಮಸೂದೆಯ ಅಧ್ಯಯನಕ್ಕೆ ನೇಮಕವಾಗಿದ್ದ ಜಂಟಿ ಅಧ್ಯಯನ ಸಮಿತಿಗೆ ಅಂದಿನ  ಸಂಸತ್ತಿನ ಗೃಹ ಇಲಾಖೆಯ  ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದ  ಕಾಂಗ್ರೆಸ್ ಮುಖಂಡ ಪ್ರಣಬ್ ಮುಖರ್ಜಿ ಅಧ್ಯಕ್ಷ ರಾಗಿದ್ದರೆಂದೂ, ಹಾಗೂ ಎಲ್ಲಾ ಪಕ್ಷಗಳ ಪ್ರತಿನಿಧಿಗಳಿದ್ದ ಜಂಟಿ ಸದನ ಸಮಿತಿಯು ಸಹ ಆ ಮಸೂದೆಯನ್ನು ಒಪ್ಪಿಕೊಂಡಿತ್ತೆಂದೂ  ಕಾಣಿಸಲಾಗಿದೆ.

ಅಂದರೆ ಎಂದಿನಂತೆ ತಮ್ಮ ತಪ್ಪನ್ನು ಸಮರ್ಥಿಸಿಕೊಳ್ಳಲು "ಅವರು ಮಾಡಿರಲಿಲ್ಲವೇ" ಎಂಬ ವಾದವನ್ನು ಮುಂದಿಟ್ಟಿದ್ದಾರಷ್ಟೇ ...

ಕೇಂದ್ರ ಸರ್ಕಾರದ ಪ್ರತ್ಯುತ್ತರದ ಪೂರ್ಣ ಪಾಠ ಈ ಲಿಂಕ್ ನಲ್ಲಿ ಸಿಗುತ್ತದೆ:

https://images.assettype.com/barandbench/2020-03/ce48cef8-485a-4f2f-8026-4882405092f8/Central_Government_CAA_Counter_Affidavit.pdf

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News